ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ವಿಪ್ರೋ ನೌಕರರಿಗೆ ಸಾವಯವ ಭೋಜನ

By Mahesh
|
Google Oneindia Kannada News

 Infosys, Wipro to offer organic veggies for staff
ಬೆಂಗಳೂರು, ಸೆ.4: ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳಾದ ಇನ್ಫೋಸಿಸ್ ಮತ್ತು ವಿಪ್ರೋ ತಮ್ಮ ಕಚೇರಿಗಳ ಕ್ಯಾಂಟೀನ್ ಗಳಲ್ಲಿ ಸಾವಯವ ತರಕಾರಿಗಳನ್ನು ಉಪಯೋಗಿಸಲು ಯೋಜನೆ ಹಾಕಿಕೊಂಡಿವೆ. ಎರಡೂ ಕಂಪೆನಿಗಳು ತರಕಾರಿ ಸರಬರಾಜಿಗೆ ಸರ್ಕಾರೇತರ ಸಂಸ್ಥೆಯಾದ ಇಂಟರ್ ನ್ಯಾಷನಲ್ ಕಾಂಪಿಟೆನ್ಸ್ ಸೆಂಟರ್ ಫಾರ್ ಆರ್ಗ್ಯಾನಿಕ್ ಅಗ್ರಿಕಲ್ಚರ್(ICCOA)ನ ಜತೆ ಮಾತುಕತೆ ನಡೆಸುತ್ತಿವೆ .

ರೈತರು ಸಾವಯವ ತರಕಾರಿ ಬೆಳೆಯಲು ಮತ್ತು ಮಾರಾಟ ಮಾಡಲು ಸಹಾಯ ಒದಗಿಸುತ್ತಿರುವ ಈ ಸಂಸ್ಥೆ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ಮದರ್ ಡೈರಿ ಫುಡ್ ಪ್ರೋಸೆಸಿಂಗ್ ಲಿಮಿಟೆಡ್ ನ ಚಿಲ್ಲರೆ ಮಾರಾಟ ಘಟಕ ಸಫಲ್ ಜತೆ ಇತ್ತೀಚೆಗೆ ಒಪ್ಪಂದವನ್ನೂ ಮಾರಾಟ ಮಾಡಿಕೊಂಡಿದೆ. ಈ ಸಂಸ್ಥೆ ದೇವನಹಳ್ಳಿ, ಚಿಕ್ಕಬಳ್ಳಾಪುರ ಮತ್ತು ದೊಡ್ಡ ಬಳ್ಳಾಪುರದ 450 ಸಾವಯವ ರೈತರಿಗೆ ನೆರವು ನೀಡುತ್ತಿದ್ದು ಬೆಂಗಳೂರಿನಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳನ್ನೂ ಹೊಂದಿದೆ.

ಅಲ್ಲದೆ ಸರಪಳಿ ಮಳಿಗೆಗಳನ್ನು ಹೊಂದಿರುವ ಸ್ಪೆನ್ಸರ್ಸ್ ಮತ್ತು ಫುಡ್ ವರ್ಲ್ಡ್ ಜತೆಗೂ ಒಪ್ಪಂದ ಮಾಡಿಕೊಂಡಿದೆ. ನಿತ್ಯ 3.5 ಟನ್ ಗಳಷ್ಟು ಸಾವಯವ ತರಕಾರಿಯನ್ನು ರೈತರು ಸಫಲ್ ಗೆ ಸರಬರಾಜು ಮಾಡುತಿದ್ದು ಇದನ್ನು ಸಫಲ್ ನ 22 ಚಿಲ್ಲರೆ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಹಾಪ್ ಕಾಮ್ಸ್ ಜತೆಗೂ ತರಕಾರಿ ಸರಬರಜಿಗೆ ಮಾತುಕತೆ ನಡೆದಿದೆ.

ದೇಶದಲ್ಲಿ ಸಾವಯವ ತರಕಾರಿ ಮಾರುಕಟ್ಟೆ ವಾರ್ಷಿಕ 450 ಕೋಟಿ ರೂಪಾಯಿಗಳಷ್ಟಿದ್ದು ಇದರಲ್ಲಿ 350 ಕೋಟಿ ರೂಪಯಿಗಳಷ್ಟು ತರಕಾರಿ ರಫ್ತಾಗುತ್ತಿದೆ. ದೇಶದಲ್ಲಿ ಪ್ರಸ್ತುತ 1.2 ಮಿಲಿಯ ಎಕರೆ ಪ್ರದೇಶದಲ್ಲಿ ಸಾವಯವ ತರಕಾರಿ ಬೆಳೆಯಲಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X