ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಮ್ಯಾಚ್ ಫಿಕ್ಸಿಂಗ್ ಸೂತ್ರದಾರ ದಾವೂದ್!

By Mrutyunjaya Kalmat
|
Google Oneindia Kannada News

Pakistani Players
ಕರಾಚಿ, ಸೆ. 4 : ಪಾಕಿಸ್ತಾನದ ಕ್ರಿಕೆಟ್ ಇತಿಹಾಸಕ್ಕೆ ಕಪ್ಪು ಮಸಿ ಬಳಿದಿರುವ ಸ್ಪಾಟ್ ಫಿಕ್ಸಿಂಗ್ ಗೆ ಘಟನೆಗೆ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ನೇರ ಕಾರಣ. ಪಾಕಿಸ್ತಾನದ ಮಾನ ಹರಾಜಾಗಲು ಕಾರಣನಾಗಿರುವ ದಾವೂದ್ ಇಬ್ರಾಹಿಂ ಮಾತ್ರ ಈ ಎಲ್ಲ ಘಟನೆಗಳ ಬಗ್ಗೆ ಉತ್ತರಿಸಬಲ್ಲ ಎಂದು ಇಂಗ್ಲೆಂಡ್ ನಲ್ಲಿರುವ ಪಾಕಿ ಬುಕ್ಕಿಗಳು ಆರೋಪಿಸಿದ್ದಾರೆ.

ಕರಾಚಿಯಲ್ಲಿ ಉದ್ಯಮ ನಡೆಸುತ್ತಿರುವ ದಾವೂದ್ ಅನೇಕ ವರ್ಷಗಳ ಹಿಂದಿನಿಂದಲೂ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿರುವುದು ಗೊತ್ತಿರುವ ಸಂಗತಿ. ಇದೀಗ ಸ್ಪಾಟ್ ಫಿಕ್ಸಿಂಗ್ ನಲ್ಲಿ ಸಿಕ್ಕಿಬಿದ್ದಿರುವ ಮಝರ್ ಮಜೀದ್ ಬರೀ ನೆಪ ಮಾತ್ರ. ಕ್ರಿಕೆಟಿನ ದೊಡ್ಡ ಜಾಲವೊಂದು ಪಾಕಿಸ್ತಾನದಲ್ಲಿದೆ. ಅದಕ್ಕೆ ಮುಖ್ಯಸ್ಥ ಈ ದಾವೂದ್ ಇಬ್ರಾಹಿಂ ಎಂದು ಬುಕ್ಕಿ ನೋಮಿ ಖಾನ್ ಮೀರರ್ ಪತ್ರಿಕೆ ಹೇಳಿಕೆ ನೀಡಿದ್ದಾನೆ.

ಫಿಕ್ಸಿಂಗ್ ಜಾಲ ಭಾರತದಲ್ಲಿಯೂ ಹರಡಿಕೊಂಡಿದೆ. ದಾವೂದ್ ಕರಾಚಿಯಲ್ಲಿ ಕುಳಿತುಕೊಂಡು ಇದನ್ನು ನಡೆಸುತ್ತಾನೆ. ಇದರಿಂದ ಕೋಟ್ಯಂತರ ರುಪಾಯಿಗಳನ್ನು ಗಳಿಸುತ್ತಿದ್ದಾನೆ. ನಾನು ಈ ದಂಧೆಗೆ ಇಳಿದು 5 ವರ್ಷವಾಗಿದ್ದು, ವರ್ಷಕ್ಕೆ ಸರಾಸರಿ 2.70 ಲಕ್ಷ ಪೌಂಡ್ ಹಣವನ್ನು ಗಳಿಸುತ್ತಿದ್ದೇನೆ ಎಂದು ನೋಮಿ ಖಾನ್ ಹೇಳಿಕೊಂಡಿದ್ದಾನೆ.

ಫಿಕ್ಸಿಂಗ್ ಅಕ್ರಮ ದಂಧೆ ಎಂದು ಗೊತ್ತಿದ್ದರೂ ಸುಲಭವಾಗಿ ಮತ್ತು ಅತೀ ವೇಗವಾಗಿ ಹಣ ಸಂಪಾದನೆ ಮಾಡಬಹುದು. ಬೆಟ್ಟಿಂಗ್ ದಂಧೆ ನಡೆಸಲು ಬೇರೆ ಕಚೇರಿಯನ್ನೇ ಆರಂಭಿಸಿದ್ದು, ಪಾಕಿಸ್ತಾನ ಮತ್ತು ಭಾರತದಲ್ಲಿರುವ ಸಣ್ಣಪುಟ್ಟ ಬುಕ್ಕಿಗಳು ನಮ್ಮ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ನನ್ನ ಕಚೇರಿಯಲ್ಲಿ ಏಳು ಜನರಿದ್ದು, ದೂರವಾಣಿ ಮೂಲಕ ಆಟಗಾರ ಮತ್ತು ಸಂಬಂಧಿಸಿದವರನ್ನು ಸಂಪರ್ಕ ಮಾಡುತ್ತಿರುತ್ತೇವೆ ಎಂದು ನೋಮಿ ಖಾನ್ ವಿವರಿಸಿದ್ದಾನೆ.

ಫುಟ್ಬಾಲ್ ಗಿಂತ ಕ್ರಿಕೆಟ್ ನಲ್ಲಿ ಹೆಚ್ಚು ಬೆಟ್ಟಿಂಗ್ ನಡೆಯುತ್ತದೆ. ಅಲ್ಲದೇ ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ನಡೆಸಲು ಅನೇಕ ದಾರಿಗಳೂ ಇವೆ. ಪಾಕಿಸ್ತಾನದಲ್ಲಂತೂ ಬೆಟ್ಟಿಂಗ್ ಮನೆಮಾತಾಗಿರುವ ಸಂಗತಿ. ಅಲ್ಲಿರುವಷ್ಟು ಬೆಟ್ಟಿಂಗಭೂತ ಬೇರೆ ಯಾವ ದೇಶದಲ್ಲೂ ಕಾಣುವುದು ಅಸಾಧ್ಯ ಎಂದು ಬುಕ್ಕಿ ಹೇಳಿದ್ದಾನೆಂದು ಮಿರರ್ ಪತ್ರಿಕೆ ವರದಿ ಮಾಡಿದೆ. ಫಿಕ್ಸಿಂಗ್ ಬಾಸ್ ದಾವೂದ್ ಗೆ ಹಣ ನೀಡಬೇಕು ಎಂದು ಖಾನ್ ಸ್ಪಷ್ಟಪಡಿಸಿದ್ದಾನೆ.

ಕ್ರಿಕೆಟ್ ಕಾಶಿ ಎಂದೇ ಪರಿಗಣಿಸಲ್ಪಟ್ಟಿರುವ ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಸ್ಪಾಟ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಿತ್ತು. ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಭಟ್, ವೇಗಿಗಳಾದ ಮೊಹ್ಮದ್ ಆಸಿಫ್ ಮತ್ತು ಮೊಹ್ಮದ್ ಅಮೀರ್ ಅವರುಗಳು ಸ್ಪಾಟ್ ಫಿಕ್ಸಿಂಗ್ ನಲ್ಲಿ ಹಣ ಪಡೆದಿದ್ದರಿಂದ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಮಾನತು ಮಾಡಿದ್ದು, ತನಿಖೆ ಆರಂಭಿಸಿದೆ.

ಭಾರತೀಯ ಮೂಲದ ಉಗ್ರ ದಾವೂದ್ ಇಬ್ರಾಹಿಂ 1992ರ ಮುಂಬೈ ಸ್ಫೋಟ ಸೇರಿದಂತೆ ಭಾರತದಲ್ಲಿ ನಡೆದಿರುವ ಅನೇಕ ವಿಧ್ವಂಸಕ ಕೃತ್ಯಗಳಿಗೆ ಈತನೇ ಮಾಸ್ಟರ್ ಮೈಂಡ್. ಪಾಕ್ ಕ್ರಿಕೆಟಿಗ ಜಾವೇದ್ ಮಿಯಂದಾದ್ ಅವರ ಮಗ ಜುನೇದ್ ಮಿಯಂದಾದ್ ದಾವೂದ್ ಮಗಳು ಮುಕ್ರಾನಳನ್ನು ಮದುವೆಯಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X