ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಜಿಹಾದಿಗಳ ಪ್ರವೇಶ ಎಚ್ಚರಿಕೆ

By Mahesh
|
Google Oneindia Kannada News

Women Jihadist
ನವದೆಹಲಿ, ಸೆ.3: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೂಲಭೂತವಾದಿಗಳು ಜಿಹಾದ್ ಹೆಸರಿನಲ್ಲಿ ಉಗ್ರಗಾಮಿ ಚಟುವಟಿಕೆ, ತರಬೇತಿಯಲ್ಲಿ ತೊಡಗಿರುವುದು ಸರ್ವವಿದಿತ. ಆದರೆ, ಈಗ ಮಹಿಳೆಯರ ಪ್ರತ್ಯೇಕ ಆತ್ಮಾಹುತಿ ದಳವನ್ನು ರಚಿಸುತ್ತಿರುವ ಉಗ್ರಗಾಮಿ ಸಂಘಟನೆಗಳು ಸದ್ಯದಲ್ಲೇ ಮಹಿಳಾ ಜಿಹಾದಿಗಳನ್ನು ಭಾರತಕ್ಕೆ ಬಿಡಲಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಲಷ್ಕರ್ ಇ ತೋಯ್ಬಾ, ಜೈಷ್ ಇ ಮೊಹಮ್ಮದ್ ಸಂಘಟನೆಗಳು ಈ ತರಬೇತಿ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿವೆ. ಮುಜಾಫರ್ ಬಾದ್ ನ ಷಾವೈ ನುಲ್ಲಾ ಶಿಬಿರವನ್ನು ಮಹಿಳೆಯರಿಗಾಗೇ ಮೀಸಲಿರಿಸಲಾಗಿದೆ. ಇಲ್ಲಿನ ಶಿಬಿರಾರ್ಥಿಗಳನ್ನು ಆತ್ಮಾಹುತಿ ದಳ ಸದಸ್ಯರನ್ನಾಗಿಸಿ ಮಾನವ ಬಾಂಬ್ ಆಗಿ ರೂಪಿಸಲಾಗುವುದು ಎಂದು ತಿಳಿದುಬಂದಿದೆ.

ಈ ಶಿಬಿರಕ್ಕೆ (Harkat-ul-Jihad al-Islami )ಹುಜಿ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಬೆಂಬಲವೂ ದೊರೆತಿದೆ. ಈಗ ಲಭ್ಯವಿರುವ ಮಾಹಿತಿಯನ್ನು ಪಾಕಿಸ್ತಾನದ ಅಧಿಕಾರಿಗಳೊಡನೆ ಚರ್ಚಿಸಲು ಭಾರತ ಹಿಂಜರಿಯುತ್ತಿದೆ. ಕಾರಣ, ವಿಷಯ ತಿಳಿದರೆ, ಉಗ್ರರಿಗೆ ತಕ್ಷಣವೇ ಶಿಬಿರವನ್ನು ಖಾಲಿ ಮಾಡಿ ತಪ್ಪಿಸಿಕೊಳ್ಳಲು ಗುಪ್ತವಾಗಿ ಸೂಚನೆ ಸಿಕ್ಕಿಬಿಡುತ್ತದೆ ಎಂಬ ಶಂಕೆ ವ್ಯಕ್ತವಾಗಿದೆ.

ಸುಮಾರು 2ಸಾವಿರಕ್ಕೂ ಅಧಿಕ ಮಹಿಳಾ ಸದಸ್ಯರನ್ನು ಈ ಶಿಬಿರ ಹೊಂದಿದ್ದು, ಬಹುತೇಕರು ಪಾಕ್ ಆಕ್ರಮಿತ ಕಾಶ್ಮೀರದವರು ಹಾಗೂ ಅವರ ಕುಟುಂಬದವರು ಭಾರತದೊಡನೆ ಸದಾ ಸಂಪರ್ಕ ಹೊಂದಿದ್ದಾರೆ. ಮಹಿಳೆಯರನ್ನು ಬಳಸುವುದರಿಂದ ಯಾವುದೇ ಶಂಕೆಗೆ ಆಸ್ಪದವಿರುವುದಿಲ್ಲ. ಭಾರತದೊಳಗೆ ಹಾಗೂ ಕಾಶ್ಮೀರ ಕಣಿವೆಯಲ್ಲಿ ಆತಂಕದ ವಾತವರಣ ಸೃಷ್ಟಿಸಲು ಸುಲಭಸಾಧ್ಯ ಎಂದು ಲಷ್ಕರ್ ನಂಬಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X