ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಸ್ಮವಾದ 2 ವರ್ಷದ ಪೋರನ ಸಿಗರೇಟ್ ಚಟ

By Mahesh
|
Google Oneindia Kannada News

Two year old Ardi kicks the butt
ಜಕಾರ್ತಾ, ಸೆ.3:ದಿನವೊಂದಕ್ಕೆ ಸರಾಸರಿ 40 ಸಿಗರೇಟ್ ಸೇದುತ್ತಿದ್ದ ಎರಡು ವರ್ಷದ ಹಸುಳೆಯ ಚಟವನ್ನು ಶತಪ್ರಯತ್ನ ಮಾಡಿಬಿಡಿಸುವಲ್ಲಿ ಕೊನೆಗೂ ಯಶ ಸಿಕ್ಕಿದೆ.

ಇಂಡೋನೇಷಿಯಾದ ಪೋರ ಅಲ್ದಿ ರಿಜಾಲ್ ನ ಗುಣಗಾನ ಹೆಚ್ಚಾದ ಮೇಲೆ ಆತಂಕಗೊಂಡ ಪೋಷಕರು ಮಕ್ಕಳ ಸರಂಕ್ಷಣಾ ಇಲಾಖೆಯ ಮೊರೆ ಹೊಕ್ಕಿದ್ದರು. ಮೂರು ತಿಂಗಳ ಸತತ ಪರಿಶ್ರಮದ ನಂತರ ಧೂಮಪಾನದ ಚಟವನ್ನು ಬಿಡಿಸುವಲ್ಲಿ ಯಶ ಪಡೆಯಲಾಗಿದೆ. ಈಗ ಎಲ್ಲಾ ಮಕ್ಕಳಂತೆ ಆಡುತ್ತಾ ನಲಿಯುತ್ತಾ ಕಾಲಕಳೆಯುತ್ತಿದ್ದಾನೆ.

ಸುಮಾರು 11 ತಿಂಗಳ ಕೆಳಗೆ ಮೀನುಗಾರ ವೃತ್ತಿಯಲ್ಲಿರುವ ತನ್ನ ತಂದೆ ಯಿಂದ ಸಿಗರೇಟ್ ಸೇದುವ ಚಟ ಬೆಳೆಸಿಕೊಂಡ ಅಲ್ದಿ, ಎಲ್ಲರಿಗೂ ಅಚ್ಚರಿಯಾಗುವಂತೆ ದಿನಕ್ಕೆ ಸುಮಾರು 40 ಸಿಗರೇಟ್ ಸೇದತೊಡಗಿದ. ಕಡೆಗೆ,ಈತನ ಸಿಗರೇಟ್ ಚಟ ನಿಲ್ಲಿಸಲು ಇನ್ನೊಂದು ಕಾರಣ ತಿಳಿದುಬಂತು. ಅಲ್ದಿಯ ಆರೋಗ್ಯ ಒಂದು ಕಡೆಯಾದರೆ, ದಿನಕ್ಕೆ ಎರಡು ಪ್ಯಾಕ್ ಸಿಗರೇಟ್ ತಂದು ಕೊಡುವಷ್ಟು ಚೈತನ್ಯವಿಲ್ಲದ ಈತನ ಪೋಷಕರು ಆರ್ಥಿಕ ದುಃಸ್ಥಿತಿಯನ್ನು ಸುಧಾರಿಸಲು ಕೊನೆಗೆ ಮಗನ ಚಟ ಅಂತ್ಯಗೊಳಿಸಲು ಮುಂದಾದರು.

ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದ ಈ ಬಾಲಕ, ಈಗ ಸಿಗರೇಟ್ ಸಿಗಲಿಲ್ಲ ಎಂದು ತಲೆ ಚಚ್ಚಿಕೊಳ್ಳುವುದು, ರಚ್ಚೆ ಹಿಡಿಯುವುದು ಮುಖ ಸಿಂಡರಿಸಿಕೊಳ್ಳುವುದನ್ನು ನಿಲ್ಲಿಸಿದ್ದಾನಂತೆ. ಬಾಲಕ ಅರ್ದಿ ಜೊತೆಗೆ ಆತನ ತಾಯಿ ಡಯಾನಾಗೂ ಕೂಡ ಉತ್ತಮ ಪೋಷಕರಾಗಿ ಬಾಳುವುದು ಹೇಗೆ ಎಂಬ ತರಬೇತಿ ಕೂಡಾ ಸಿಕ್ಕಿದೆ. ಬಡತನ, ಅನಕ್ಷರತೆ ಏನೆಲ್ಲಾ ಮಾಡಿಸಬಲ್ಲದು ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X