• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇತ್ರದಾನ ಜಾಗೃತಿ ಅಂಧರೊಡನೆ ಶ್ರೀಶಾಂತ್ ನಡಿಗೆ

By Mahesh
|

ಬೆಂಗಳೂರು, ಸೆ.3:ನೇತ್ರದಾನ ಜಾಗೃತಿ ಜಾಥ ಹೊರಡುವ ಸುಮಾರು ಇನ್ನೂರಕ್ಕೂ ಹೆಚ್ಚುಅಂಧರೊಡನೆ ಕ್ರಿಕೆಟರ್ ಶ್ರೀಶಾಂತ್ ಕೂಡಾ ಭಾಗವಹಿಸಲಿದ್ದಾರೆ. ಅಂಧರಿಗಾಗಿ ಪಾದಯಾತ್ರೆ ಹೆಸರಿನ ಜಾಥವನ್ನು ಐಡಿಎಲ್ ಫೌಂಡೇಷನ್ ಸೆ.5 ರಂದು ಆಯೋಜಿಸಿದೆ.

ಇಂಡಿಯನ್ ಡಿಸೆಬಲ್ಡ್ ಲೀಗ್ (IDL) ಫೌಂಡೇಷನ್ ಎಂಬ ಲಾಭರಹಿತ ಸರ್ಕಾರೇತರ ಸಂಸ್ಥೆ(NGO) ತನ್ನ 7ನೇ ವಾರ್ಷಿಕೋತ್ಸವವನ್ನು ಈ ಮೂಲಕ ಆಚರಿಸಿಕೊಳ್ಳುತ್ತಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಮತ್ತಿಕೆರೆಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಡಿಜಿ , ಐಜಿಪಿ ಅಜಯ್ ಕುಮಾರ್ ಸಿಂಗ್ ಅವರು ಒಂದು ಕಿ.ಮೀ ದೂರ ಸಾಗುವ ವಿಶಿಷ್ಟ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಹಲವಾರು ರಾಜಕೀಯ ನಾಯಕರುಗಳು, ಕಾರ್ಪೊರೇಟರ್ ಗಳು, ಗಣ್ಯರುಗಳು ಸ್ವಯಂಪ್ರೇರಿತರಾಗಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ, ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಸಹಕರಿಸಲಿದ್ದಾರೆ ಎಂದು ಐಡಿಎಲ್ ಫೌಂಡೇಷನ್ ನ ಸ್ಥಾಪಕ ಹಾಗು ಕಾರ್ಯಕಾರಿ ಟ್ರಸ್ಟಿ ಪಿಕೆ ಪೌಲ್ ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ ನೇತ್ರಹೀನರಿಗೆ ವಿಶೇಷ ಗಡಿಯಾರಗಳನ್ನು ನೀಡಲಾಗುವುದು. ಸಾರ್ವಜನಿಕರು ಈ ಪಾದಯಾತ್ರೆಗೆ ಮನಃಪೂರ್ವಕವಾಗಿ ಬೆಂಬಲ ಸೂಚಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಪೌಲ್ ಆಶಿಸುತ್ತಾರೆ.

ನಾರಾಯಣ ನೇತ್ರಾಲಯದ ಡಾ. ರಾಜ್ ಕುಮಾರ್ ನೇತ್ರದಾನ ಬ್ಯಾಂಕ್ ಜೊತೆಗೂಡಿ ಸಂಗೀತಾಸಕ್ತ ಅಂಧರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಐಡಿಎಲ್ ಫೌಂಡೇಷನ್ ಸತತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X