ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕ್ಷ್ಯಾಧಾರಗಳ ಕೊರತೆ ಎದುರಿಸುತ್ತಿರುವ ಶುಭಾ ಕೇಸ್

By Mrutyunjaya Kalmat
|
Google Oneindia Kannada News

Shubha-Arun Varma
ಬೆಂಗಳೂರು, ಸೆ. 2 : ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ತನ್ನ ಭಾವಿ ಪತಿ ಗಿರೀಶ್‌ನ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ವಕೀಲೆ ಶುಭಾ ತಪ್ಪಿತಸ್ಥಳಲ್ಲ ಎನ್ನುವುದು ಅವರ ಪರ ವಕೀಲ ವಾದ. ಆದರೆ, ಈ ಪ್ರಕರಣದಲ್ಲಿ ಸರಕಾರಿ ವಕೀಲರು ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲರಾಗುತ್ತಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಅಧೀನ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿದ್ದ ಶುಭಾರ ಅರ್ಜಿಯ ವಿಚಾರಣೆ ವೇಳೆ ಅವರ ಪರ ವಕೀಲರು ನ್ಯಾ.ಕೆ.ಶ್ರೀಧರರಾವ್ ಹಾಗೂ ನ್ಯಾ ಬಿ.ವಿ.ಪಿಂಟೋ ಅವರಿದ್ದ ವಿಭಾಗೀಯ ಪೀಠದ ಮುಂದೆ ಶುಭಾ ಪರ ವಕೀಲ ಸಿ ವಿ ನಾಗೇಶ್ ಸಮರ್ಥಿಸಿಕೊಂಡರು. ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಸರಕಾರ ಎಡುವುತ್ತಿರುವುದು ಹಂತಕಿಗೆ ಶುಭಾಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ.

ಗಿರೀಶ್ ಕೊಲೆಗೆ ಸಂಚು ರೂಪಿಸಿದ ಮೊದಲನೇ ಆರೋಪಿ ಅರುಣ್ ವರ್ಮಾ, ಶಾಕ್ ಅಬ್ಸರ್ಬರ್ ನಿಂದ ಹೊಡೆದು ಕೊಲೆ ಮಾಡಿದ ವೆಂಕಟೇಶ್, ಸಹಾಯ ಮಾಡಿದ ಅರುಣ್ ವರ್ಮಾನ ಸಂಬಂಧಿ ದಿನೇಶ್ ಹಾಗೂ ಕೊಲೆಯ ಸೂತ್ರಧಾರಿ ಶುಭಾಗೆ ಐಪಿಸಿ ಸೆಕ್ಷನ್ 302, 120ರಡಿ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಶುಭಾಗೆ ಹೆಚ್ಚುವರಿಯಾಗಿ ಮೂರು ವರ್ಷ ಸಾದಾ ಶಿಕ್ಷೆಯನ್ನು ನಗರದ 17ನೇ ತ್ವರಿತ ನ್ಯಾಯಾಲಯ ವಿಧಿಸಿತ್ತು. ಜೊತೆಗೆ 50 ಸಾವಿರ ರುಪಾಯಿ ದಂಡವನ್ನು ವಿಧಿಸಿತ್ತು.

ಶುಭಾ ಆರೋಪಿಯೂ ಅಲ್ಲ. ಅಪರಾಧಿಯೂ ಅಲ್ಲ. ಅವರ ನಡತೆ ಕುರಿತು ಒಂದಿಷ್ಟು ಕಪ್ಪುಚುಕ್ಕೆ ಇಲ್ಲ. ಆಕೆ ಸಂಪೂರ್ಣ ಮುಗ್ಧೆ ಮತ್ತು ನಿರಪರಾಧಿ ಇಂತವರು ಹತ್ಯೆಗೈಯ್ಯಲು ಹೇಗೆ ಸಾಧ್ಯ? ಶುಭಾಳನ್ನು ಈ ಪ್ರಕರಣದಲ್ಲಿ ವ್ಯವಸ್ಥಿತವಾಗಿ ಸಿಲುಕಿಸಲಾಗಿದೆ ಎಂದು ಅವರ ವಕೀಲ ಸಿ ವಿ ನಾಗೇಶ್ ವಾದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X