ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿಯ ಪ್ರಾಣ ಉಳಿಸಿದ ಪೋನ್ ಸಂಭಾಷಣೆ!

By Mrutyunjaya Kalmat
|
Google Oneindia Kannada News

ಬೆಂಗಳೂರು, ಸೆ. 2 : ಮೊಬೈಲ್ ಸೇರಿದಂತೆ ಫೋನ್ ಗಳು ಸಕತ್ ಕಿರಿಕಿರಿ ಮಾಡ್ತವೆ ಎನ್ನುವ ಆರೋಪಗಳ ಮದ್ಯೆಯೇ ಫೋನ್ ಕರೆಯಿಂದಲೇ ಯುವತಿಯೊಬ್ಬಳು ಪ್ರಾಣ ರಕ್ಷಿಸಿಕೊಂಡ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಆಗಸ್ಟ್ 13 ರಂದೇ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೋನ್ ಮೂಲಕ ಪ್ರಾಣ ಉಳಿಸಿಕೊಂಡವರ ಹೆಸರು ವಸುಂಧರಾ(25). ವೃತ್ತಿಯಿಂದ ಫ್ಯಾಶನ್ ಡಿಸೈನರ್ ಆಗಿರುವ ಇವರು ಮನೆಯಲ್ಲಿ ರಾತ್ರಿ ಏಕಾಂಗಿಯಾಗಿದ್ದ ಹೊತ್ತು ಅಡುಗೆಯವನಾಗಿ ಸೇರಿಕೊಂದಿದ್ದ ಅರ್ಜುನ್ ಪಂಡಿತ್ ಮತ್ತು ಆತನ ಸ್ನೇಹಿತ ರವೀಂದ್ರ ಕುಮಾರ್ ಠಾಕೂರ್, ವಸುಂಧರಾ ಅವರನ್ನು ಹತ್ಯೆಗೈದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡುವ ಸಂಚು ರೂಪಿಸಿದ್ದರು. ತಾಯಿ ವಿಶಾಖಪಟ್ಟಣಕ್ಕೆ ಹೋಗಿದ್ದರೆ, ಸಹೋದರ ಸಿದ್ಧಾರ್ಥ ಕೆಲಸಕ್ಕೆ ತೆರಳಿದ್ದರು.

ದರೋಡೆಕೋರರು ರಾತ್ರಿ ಮನೆ ಪ್ರವೇಶಿದ ಸಮಯಕ್ಕೆ ಸರಿಯಾಗಿ ವಸುಂಧರಾ ಅಣ್ಣ ಸಿದ್ದಾರ್ಥನೊಂದಿಗೆ ಸಂಭಾಷಿಸುತ್ತಿದ್ದರು. ಕಳ್ಳರು ಮನೆ ಪ್ರವೇಶಿಸಿದ್ದು ತಿಳಿಯುತ್ತಿದ್ದಂತೆಯೇ ವಸುಂಧರಾ ಕೂಗಾಟ, ಚೀರಾಟ ಶುರುಮಾಡಿಕೊಂಡಿದ್ದಾರೆ. ತನ್ನ ಸಹೋದರನಿಗೂ ವಿಷಯ ತಿಳಿಸಿದ್ದಾರೆ. ಕಳ್ಳತನಕ್ಕೆ ಮುಂದಾದ ನಂತರ ಫೋನ್ ಕಟ್ ಮಾಡಿದ ಅವರು ಕೂಗಾಟವನ್ನು ಮುಂದುವರೆಸಿದ್ದಾರೆ. ಮನೆಗೆ ಕಳ್ಳರು ನುಗ್ಗಿರುವ ವಿಷಯ ತಿಳಿದ ಸಿದ್ಧಾರ್ಥ ನೇರವಾಗಿ ಪೊಲೀಸ್ ಠಾಣೆ ತೆರಳಿ ಪೊಲೀಸರಿಗೆ ಸಂಗತಿ ತಿಳಿಸಿದ್ದಾನೆ. ತಕ್ಷಣ ಹೊಯ್ಸಳದೊಂದಿಗೆ ಮನೆಗೆ ಆಗಮಿಸಿದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X