ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯಲಾಗದ ಅಣ್ಣಿಗೇರಿ ಬುರುಡೆಗಳ ರಹಸ್ಯ

By Mrutyunjaya Kalmat
|
Google Oneindia Kannada News

Annigeri skull
ಧಾರವಾಡ, ಸೆ. 2 : ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಗ್ರಾಮದ ಹೊರವಲಯದಲ್ಲಿ ದೊರೆತಿರುವ ನೂರಾರು ತಲೆಬುರೆಡೆಗಳು ಹಲವು ಸಂಶಯಗಳಗೆ ಕಾರಣವಾಗಿದೆ. ಅಲ್ಲದೇ ಬುರುಡೆಗಳನ್ನು ಡಿಎನ್ಎ ಪರೀಕ್ಷೆಗೆ ಹೈದರಾಬಾದ್ ಗೆ ಕಳುಹಿಸಿಕೊಡಲಾಗಿದೆ.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ವಿಎಸ್ ಆಚಾರ್ಯ, ಇದು 150 ವರ್ಷಗಳ ಹಿಂದಿನದ್ದಾಗಿದೆ. ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಿರುವ ಸಾಧ್ಯತೆ ಇದ್ದು, ಯಾವುದೇ ರೀತಿಯ ಆತಂಕ ಬೇಡ ಎಂದಿದ್ದಾರೆ. ಹಲವು ಸಂಶಯಗಳಿಗೆ ಕಾರಣವಾಗಿರುವ ತಲೆ ಬುರುಡೆಗಳನ್ನು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಡಿಎನ್‌ಎ ಮೂಳೆ ತಜ್ಞರು ಸ್ಥಳಕ್ಕೆ ತೆರಳಿ ಹಲವು ತಲೆ ಬುರುಡೆಗಳನ್ನು ವಶಕ್ಕೆ ತೆಗೆದುಕೊಂಡು ಅದನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ಅದರ ಪರೀಕ್ಷೆ ಸಂಪೂರ್ಣ ಆಗಿಲ್ಲ. ಪರೀಕ್ಷೆಯ ವರದಿ ಬಂದ ನಂತರ ಈ ಪ್ರಕರಣವನ್ನು ಬೇಧಿಸಲಾಗುವುದು ಎಂದು ಆಚಾರ್ಯ ವಿವರಿಸಿದರು.

ಪ್ರಾಥಮಿಕ ವರದಿ ಪ್ರಕಾರ ಈ ತಲೆ ಬುರುಡೆಗಳು 100ರಿಂದ 150 ವರ್ಷ ಗಳಷ್ಟು ಹಿಂದಿನದ್ದಾಗಿದೆ. ಈ ಹಿಂದೆ ನಡೆದ ಯಾವುದೋ ಯುದ್ಧ ಇಲ್ಲವೆ ಸಾಮೂಹಿಕ ಹತ್ಯೆಯಲ್ಲಿ ಸಾವನ್ನಪ್ಪಿದವರನ್ನು ಇಲ್ಲಿಗೆ ತಂದು ಹೂತಿರಬಹುದು ಎಂದ ಆಚಾರ್ಯ, ಕೇವಲ ತಲೆ ಬುರುಡೆ ಮಾತ್ರ ಅಲ್ಲ ಕೆಲವೆಡೆ ಅಸ್ತಿ ಪಂಜರ ಕೂಡಾ ಪತ್ತೆಯಾಗಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X