ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಸಿಪಾಳ್ಯ ಹುಸಿಬಾಂಬ್ ಕರೆ ಕೇಸ್ ಖತಂ

By Mahesh
|
Google Oneindia Kannada News

Kalasipalya Hoax Bomb call Case Kudligi link
ಬಳ್ಳಾರಿ, ಸೆ.2: ಬೆಂಗಳೂರಿನ ಕಲಾಸಿಪಾಳ್ಯದ ಚರಂಡಿಯಲ್ಲಿ ಬಾಂಬ್ ಇಡಲಾಗಿದೆ ಎಂದು 2008 ರಲ್ಲಿ 'ಸುಳ್ಳು ಬಾಂಬ್ ಬೆದರಿಕೆ ಕರೆ' ಮಾಡಿದ್ದ ಕೂಡ್ಲಿಗಿ ಸಮೀಪದ ಕುಗ್ರಾಮದ ಇಬ್ಬರು ಯುವಕರಿಗೆ ಕೂಡ್ಲಿಗಿ ನ್ಯಾಯಾಲಯ ತಲಾ 2000 ರು. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

ಕೂಡ್ಲಿಗಿ ತಾಲೂಕಿನ ಹಿರೇವಡ್ಡರಹಳ್ಳಿ ಗ್ರಾಮದ ಬಣಕಾರ ಬಸವರಾಜ್ (28) ಮತ್ತು ಕುಂಟೇರ ಅಣ್ಣಪ್ಪ (30). ಇವರು 2008ರ ಸೆಪ್ಟಂಬರ್ 1ರಂದು ಕೂಡ್ಲಿಗಿಯಿಂದ ಬೆಂಗಳೂರಿನ ಕಂಟ್ರೋಲ್‌ರೂಂಗೆ ಕರೆ ಮಾಡಿ ಬೆಂಗಳೂರಿನ ಕಲಾಸಿಪಾಳ್ಯ ಪ್ರದೇಶದ ಚರಂಡಿಯಲ್ಲಿ ಬಾಂಬ್ ಇಡಲಾಗಿದೆ' ಎಂದು ಸುಳ್ಳು ಬಾಂಬ್ ಬೆದರಿಕೆ ಕರೆ ಮಾಡಿದ್ದರು.

ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆದಿತ್ತು. ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಎನ್.ಎಸ್. ಕುಲಕರ್ಣಿ ಅವರು ಆರೋಪಿಗಳ ಪರ - ವಿರುದ್ಧ ವಿಚಾರಣೆ ನಡೆಸಿ ಪ್ರತಿಯೊಬ್ಬರಿಗೂ 2,000 ರುಪಾಯಿಗಳ ದಂಡ ವಿಧಿಸಿದ್ದಾರೆ.

ಆರೋಪಿಗಳು ದಂಡ ಪಾವತಿಸುವಲ್ಲಿ ವಿಫಲರಾದಲ್ಲಿ ತಲಾ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆಯನ್ನು ಅನುಭವಿಸಬೇಕು ಎಂದು ತಿಳಿಸಿದ್ದಾರೆ.ಸರ್ಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ದಳವಾಯಿ ಚಕ್ರಪಾಣಿ ವಾದ ಮಂಡಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X