ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈನ್ ಪ್ರಿಯರಿಗೆ ಸಿಹಿಸುದ್ದಿ; ಬಂದಿದೆ ಮಾವಿನ ವೈನ್

By Rajendra
|
Google Oneindia Kannada News

Lucknow research centre invents mango wine
ನವದೆಹಲಿ, ಸೆ.1: ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮಾವಿನ ಹಣ್ಣಿನಲ್ಲಿ ತರಹೆವಾರಿ ಪಾನೀಯಗಳನ್ನು ತಯಾರಿಸಬಹುದು. ಈಗ ವೈನ್ ಪ್ರಿಯರಿಗೊಂದು ಸಿಹಿ ಸುದ್ದಿ. ಲಖನೌ ಮೂಲದ ಸಂಶೋಧನಾ ಸಂಸ್ಥೆಯೊಂದು ಮಾವಿನ ಹಣ್ಣಿನ ವೈನ್ ಅಭಿವೃದ್ಧಿಪಡಿಸಿದೆ.

ಇನ್ನೇನು ಮಾವಿನ ಕಾಯಿ ಉಪ್ಪಿನಕಾಯಿ ಜೊತೆಗೆ ಮಾವಿನ ವೈನ್! ಒಳ್ಳೆ ಕಾಂಬಿನೇಷನ್ ಅಲ್ಲವೆ. ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಸಬ್‌ಟ್ರೋಪಿಕಲ್ ಹಾರ್ಟಿಕಲ್ಚರ್ ರೀಸರ್ಜ್ (ಸಿಐಎಸ್‌ಎಚ್‌ಆರ್) ಸಂಸ್ಥೆಯ ವಿಜ್ಞಾನಿಗಳು ಮಾವಿನ ಹಣ್ಣುಗಳನ್ನು ಬಳಸಿಕೊಂಡು ಫೈನಾಗಿ ವೈನ್ ತಯಾರಿಸಿದ್ದಾರೆ.

ದಸ್ಸೇರಿ, ಲಂಗ್ರಾ, ಚಿಸ್ ನಮೂನೆಯ ಮಾವನ್ನು ಬಳಸಿಕೊಂಡು ವೈನ್ ಸಿದ್ಧಪಡಿಸಿದ್ದಾಗಿ ಸಂಸ್ಥೆಯ ನಿರ್ದೇಶಕ ಎಚ್ ರವಿಶಂಕರ್ ತಿಳಿಸಿದ್ದಾರೆ. ಸಾಂಪ್ರದಾಯಿಕವಾಗಿ ದ್ರಾಕ್ಷಿ ಮತ್ತು ಸೇಬನ್ನು ಬಳಸಿಕೊಂಡು ವೈನ್ ತಯಾರಿಸಲಾಗುತ್ತದೆ. ಹೆಚ್ಚ್ಚಾಗಿ ಫ್ರಾನ್ಸ್, ಇಟಲಿ,ಸ್ಪೈನ್ ಮತ್ತು ಆಸ್ಟ್ರಿಯಾ ದೇಶಗಳಲ್ಲಿ ಸಾಂಪ್ರದಾಯಿಕ ವೈನ್ ತಯಾರಾಗುತ್ತದೆ.

ಸಂಸ್ಥೆ 3 ವರ್ಷಗಳ ಸತತ ಪ್ರಯತ್ನದ ಫಲವಾಗಿ ಮಾವಿನ ಹಣ್ಣಿನ ವೈನ್ ತಯಾರಾಗಿದೆ. ನೀಲಿಮಾ ಗಾರ್ಗ್ ನೇತೃತ್ವ ವಹಿಸಿದ್ದ ತಂಡಮಾವಿನ ವೈನ್ ಕಂಡುಹಿಡಿಯಲು ಬಹಳಷ್ಟು ಶ್ರಮವಹಿಸಿತ್ತು. ಮಾವಿನ ವೈನ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಶೇ.8 ರಿಂದ 9 ರಷ್ಟಿರುತ್ತದೆ. ಆದರೆ ದ್ರಾಕ್ಷಿ ವೈನ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಶೇ. 12 ರಿಂದ 15ರಷ್ಟಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X