ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಜರಾಜನಿಗೆ ಭಾರತದ ಪಾರಂಪರಿಕ ಪ್ರಾಣಿ ಸ್ಥಾನ

By Mahesh
|
Google Oneindia Kannada News

Elephant set to get heritage animal tag
ನವದೆಹಲಿ, ಸೆ.1: ಅರಣ್ಯ ನಾಶ ಹಾಗೂ ದಂತಕಳ್ಳರ ಕೆಂಗಣ್ಣಿಗೆ ಗುರಿಯಾಗಿ ಅವಸಾನದ ಅಂಚಿಗೆ ಬಂದು ನಿಂತಿರುವ ಆನೆ ಇನ್ನು ಭಾರತದ ಪಾರಂಪರಿಕ ಪ್ರಾಣಿ. ಇಂತದ್ದೊಂದು ಮಹತ್ವದ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸರ್ಕಾರ ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಡಿಸಲು ಸಜ್ಜಾಗಿದೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಈ ವಿಷಯವನ್ನು ತಿಳಿಸಿದರು.

ದೇಶದ ಧರ್ಮ ಮತ್ತು ಸಂಸ್ಕೃತಿಯೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವ ಆನೆಯ ರಕ್ಷಣೆ ಕ್ರಮವಾಗಿ ಅದನ್ನು ರಾಷ್ಟ್ರೀಯ ಪರಂಪರೆ ಪ್ರಾಣಿ ಎಂದು ಘೋಷಿಸಲಾಗುವುದೆಂದು ಸ್ಪಷ್ಟಪಡಿಸಿದರು. ರಕ್ಷಣೆಗೆ ಮಹತ್ವ ಆನೆಯು ಶತಮಾನಗಳಿಂದಲೂ ನಮ್ಮ ಪರಂಪರೆಯ
ಭಾಗವಾಗಿದೆ.

ಆದರೆ ಇತ್ತೀಚೆಗೆ ಅರಣ್ಯ ನಾಶ ಹಾಗೂ ದಂತಕಳ್ಳರ ಹಾವಳಿಯಿಂದಾಗಿ ಆನೆಗಳ ಸಂತತಿ ಅವನತಿಯತ್ತ ಸಾಗಿದೆ. ಹೀಗಾಗಿ ಅವಸಾನದ ಅಂಚಿ ನಲ್ಲಿರುವ ರಾಷ್ಟ್ರೀಯ ಪ್ರಾಣಿ ಹುಲಿಯ ರಕ್ಷಣೆಗೆ ನೀಡಿರುವಷ್ಟೇ ಮಹತ್ವವನ್ನು ನಾವು ಆನೆಯ ರಕ್ಷಣೆಗೂ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಸರಕಾರವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಡಾಲ್ಫಿನ್‌ನ್ನು ರಾಷ್ಟ್ರೀಯ ಜಲಚರ ಪ್ರಾಣಿ ಎಂದು ಕೇಂದ್ರ ಸರಕಾರವು ಘೋಷಿಸಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾದರಿಯಲ್ಲಿ ರಾಷ್ಟ್ರೀಯ ಆನೆಗಳ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲು ವನ್ಯಜೀವಿ(ರಕ್ಷಣೆ) ಕಾಯ್ದೆಗೆ ತಿದ್ದುಪಡಿ ತರಲಾಗುವುದೆಂದೂ ರಮೇಶ್ ತಿಳಿಸಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ತಿದ್ದುಪಡಿ ಯನ್ನು ಮಂಡಿಸಲಾಗುವುದು ಎಂದು ಹೇಳಿದ ಅವರು, ದೇಶ ದಲ್ಲೀಗ ಕೇವಲ 1141 ಹುಲಿಗಳಿವೆ. ಆನೆ ಸಂತತಿಯೂ ಅಂತಹ ಸ್ಥಿತಿ ತಲುಪುವ ಮೊದಲೇ ಅವುಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಿ ನುಡಿದರು.

ಪರಿಸರ ಸಚಿವಾಲಯವು ರಚಿಸಿದ ಆನೆ ಕಾರ್ಯ ಪಡೆ(Elephant Task Force)ಯು ಮಂಗಳವಾರ ತನ್ನ ವರದಿಯನ್ನು ಸಚಿವರಿಗೆ ಸಲ್ಲಿಸಿದ್ದು, ಹೊಸ ಅಭಯಾರಣ್ಯಗಳನ್ನು ಸೃಷ್ಟಿಸುವ, ಕಳ್ಳಸಾಗಾಣಿಕೆಯನ್ನು ತಡೆಯುವ ಮತ್ತು ಅರಣ್ಯ ಪ್ರದೇಶಗಳಲ್ಲಿ ಆನೆಗಳು ಚಲಿಸುವ ಮಾರ್ಗದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಬಂಧಿಸುವ ಮೂಲಕ ಭಾರತವು ತನ್ನ ಆನೆ ಸಂತತಿಯನ್ನು ರಕ್ಷಿಸಬೇಕಾಗಿದೆ ಎಂದು ಬೊಟ್ಟು ಮಾಡಿದೆ.

ಮೃಗಾಲಯಗಳು ಮತ್ತು ದೇವಸ್ಥಾನಗಳಲ್ಲಿಯ 3,500 ಸಾಕುಆನೆಗಳು ಸೇರಿದಂತೆ ದೇಶದಲ್ಲಿಂದು 25,000ಕ್ಕೂ ಅಧಿಕ ಆನೆಗಳಿವೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X