ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಎಂದರೇನು ?

By Mahesh
|
Google Oneindia Kannada News

Spot-Fixing in Cricket
ಲಂಡನ್, ಆ.31:ಮ್ಯಾಚ್ ಫಿಕ್ಸಿಂಗ್ ಎಂಬ ಕಳ್ಳಾಟ 90 ರ ದಶಕದಲ್ಲಿ ಶಾರ್ಜಾದಲ್ಲಿ ಉಗಮವಾಗಿದ್ದು ಎಂದು ನಂಬಲಾಗಿದೆ. ಇದೇ ರೀತಿ ಸ್ಪಾಟ್ ಫಿಕ್ಸಿಂಗ್ ಗೆ ಮೂಲ ಟ್ವಿಂಟಿ 20 ಟೂರ್ನಿ ಎನ್ನಲಾಗುತ್ತಿದೆ. ಸ್ಪಾಟ್ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ತ್ವರಿತಗತಿಯಲ್ಲಿ ದುಷ್ಕರ್ಮಿಗಳ ಜೋಳಿಗೆ ತುಂಬಿಸುವ ವಾಮಮಾರ್ಗ.

ಸ್ಪಾಟ್ ಫಿಕ್ಸಿಂಗ್ ಏನು ಎಂದು ತಿಳಿದುಕೊಳ್ಳುವ ಮುನ್ನ ಸ್ಪಾಟ್ ಬೆಟ್ಟಿಂಗ್ ಏನು ಎಂದು ತಿಳಿದುಕೊಳ್ಳಬೇಕಾದ್ದು ಅವಶ್ಯ. ಕ್ರಿಕೆಟ್‌ನಲ್ಲಿನ ಬೆಟ್ಟಿಂಗ್ ಈಗ ಕೇವಲ ಫಲಿತಾಂಶದ ಮೇಲಷ್ಟೇ ನಡೆಯುವುದಲ್ಲ. ಟಾಸ್ ಗೆಲ್ಲುವುದರಿಂದ ಹಿಡಿದು ಆಟಗಾರರ ಮತ್ತು ಬೌಲರುಗಳ ನಿರ್ವಹಣೆಯ ಮೇಲೆ ಪ್ರತಿಯೊಂದು ಓವರಿನ ಆಧಾರದಲ್ಲೂ ಬೆಟ್ಟಿಂಗ್ ನಡೆಯುತ್ತದೆ.

ಪ್ರತಿ ಓವರಿನಲ್ಲಿ ಎಷ್ಟು ರನ್ ಹೋಗುತ್ತದೆ, ಮೇಡನ್ ಆಗುತ್ತದೋ ಇಲ್ಲವೋ, ವಿಕೆಟ್ ಬೀಳುತ್ತದೋ ಇಲ್ಲವೋ ಎಂದು ಕೂಡ ಬೆಟ್ ಕಟ್ಟಬಹುದು. ಹೊಸದಾಗಿ ಕ್ರೀಸಿಗೆ ಬರುವ ಬ್ಯಾಟ್ಸ್‌ಮನ್ 10 ರನ್ ಗಳಿಸುತ್ತಾನೋ ಇಲ್ಲವೋ ಅಥವಾ ಮುಂದಿನ ಓವರಿನಲ್ಲಿ ಬೌಂಡರಿ ಬಾರಿಸುತ್ತಾನೋ ಇಲ್ಲವೋ ಮುಂಚಿತಾಗಿಯೂ ಬೆಟ್ ಕಟ್ಟಲಾಗುತ್ತದೆ.ಹೀಗಾಗಿ ಸ್ಪಾಟ್ ಬೆಟ್ಟಿಂಗ್ ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ ಹಾಗಿದೆ.

ಇವೆಲ್ಲವೂ ಆಯಾ ಕ್ಷಣಗಳಲ್ಲಿ ಕಟ್ಟುವ ಬೆಟ್‌ಗಳು. ಇಂತಹ ಬೆಟ್ ಸ್ವೀಕರಿಸುವ ಭಾರೀ ದೊಡ್ಡ ಜಾಲವೇ ಇದೆ. ಮುಖ್ಯವಾಗಿ ಮೊಬೈಲ್ ಫೋನ್ ಮುಖಾಂತರವೆ ಈ ಬೆಟ್‌ಗಳು ನಡೆಯುತ್ತವೆ. ಇವೇ ಸ್ಪಾಟ್ ಬೆಟ್ಟಿಂಗ್.

ಇಂತಹ ಸ್ಪಾಟ್ ಬೆಟ್ಟಿಂಗ್‌ನ್ನು ಗೆಲ್ಲಲು ನಡೆಸುವುದೇ ಸ್ಪಾಟ್ ಫಿಕ್ಸಿಂಗ್. ಒಬ್ಬಾತನಿಗೆ ಒಂದು ಓವರಿನಲ್ಲಿ ನೋಬಾಲ್ ಪ್ರಯೋಗಿಸಲ್ಪಡುತ್ತದೆ ಎಂದು ಮುಂಚಿತವಾಗಿಯೆ ಅರಿವಿದ್ದರೆ ಹಾಗೂ ಆ ಕುರಿತಂತೆ ಅವನು ಲಕ್ಷಾಂತರ ರೂಪಾಯಿ ಬೆಟ್ ಕಟ್ಟಿದರೆ ಅದೆಷ್ಟು ಹಣ ಸಂಗ್ರಹಿಸಬಹುದು ಯೋಚಿಸಿ.

ಇಂಗ್ಲೆಂಡಿನಲ್ಲಿ ಪಾಕ್ ವಿರುದ್ಧದ ಟೆಸ್ಟಿನಲ್ಲಿ ಆಗಿರುವುದೂ ಹಾಗೆಯೆ. ಮಜೀದ್ ನೋಬಾಲ್ ಎಸೆಯಲು ಮೊದಲೇ ಆಟಗಾರರನ್ನು ಫಿಕ್ಸ್ ಮಾಡಿದ್ದ. ಅದಕ್ಕಾಗಿ ಆಟಗಾರರಿಗೆ ದುಡ್ಡನ್ನೂ ಕೊಟ್ಟಿದ್ದ. ಆದರೆ ಆತ ಆ ಓವರಿನಲ್ಲಿ ನೋಬಾಲ್‌ಗಳು ಪ್ರಯೋಗಿಸಲ್ಪಡುತ್ತವೆ ಎಂದು ಬುಕ್ಕಿಗಳಲ್ಲಿ ಬೆಟ್ ಕಟ್ಟಿ ಆಟಗಾರರಿಗೆ ಕೊಟ್ಟಿರುವ ಹಣದ ನಾಲ್ಕು ಪಟ್ಟು ಹಣವನ್ನು ಬುಕ್ಕಿಗಳಿಂದ ಗಳಿಸಿರುವ ಸಾಧ್ಯತೆಯಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X