ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಕದ್ದವ ಚಿಕಾಗೋದಲ್ಲಿ ಉಪನ್ಯಾಸಕ

By Mahesh
|
Google Oneindia Kannada News

Hariprasad, source: NDTV
ನವದೆಹಲಿ, ಆ.31: ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ದೋಷ ತೋರಿಸಿದ್ದಕ್ಕೆ ಬಂಧನಕ್ಕೊಳಗಾಗಿದ್ದ ನತದೃಷ್ಟ ಹರಿಪ್ರಸಾದ್ ಗೆ ಜಾಮೀನು ಪಡೆದ ಎರಡು ದಿನದೊಳಗೆ ತಮ್ಮ ಮುಂದಿನ ಕಾರ್ಯ ಯೋಜನೆಯನ್ನು ಪ್ರಕಟಿಸಿದ್ದಾರೆ. ಚಿಕಾಗೋದಲ್ಲಿ ನಡೆಯುವ ಸಮ್ಮೇಳನದಲ್ಲಿ ಇವಿಎಂನ ಲೋಪದೋಷಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಹೈದರಾಬಾದ್ ಮೂಲದ ಹರಿಪ್ರಸಾದ್ ಈಗ ವಿದ್ಯುನ್ಮಾನ ಮತಯಂತ್ರ ತಿರುಚುವಿಕೆ, ಅಕ್ರಮ ಕೃತ್ಯಗಳ ಬಗ್ಗೆ ಅಕ್ಟೋಬರ್ 5 ರಂದು ಉಪನ್ಯಾಸ ನೀಡಲಿದ್ದಾರೆ. ಇವರ ಜೊತೆಗೆ ಇನ್ನಿಬ್ಬರು ವಿದೇಶಿಯರು ಕೂಡಾ ಈ ವಿಷಯವಾಗಿ ಪ್ರಬಂಧ ಮಂಡಿಸಲಿದ್ದಾರೆ.

ಚಿಕಾಗೋದ 'ಕಂಪ್ಯೂಟರ್ ಅಂಡ್ ಕಮ್ಯೂನಿಕೇಷನ್ ಸೆಪ್ಟಿ' ಕುರಿತ ಸಮ್ಮೇಳನದಲ್ಲಿ 'Security Analysis of India"s Electronic Voting Machines' ಎಂಬ ವಿಷಯವನ್ನು ಹರಿಪ್ರಸಾದ್ ಮಂಡಿಸಲಿದ್ದಾರೆ. ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜರಾದ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಮುಂಬೈನ ಕಲೆಕ್ಟರ್ ಕಚೇರಿಯೊಂದರಿಂದ ಇವಿಎಂ ಕದ್ದ ಆರೋಪದ ಮೇಲೆ ವಿದ್ಯುನ್ಮಾನ ಸುರಕ್ಷತಾ ತಜ್ಞ ಹರಿಪ್ರಸಾದ್ ಅವರನ್ನು ಬಂಧಿಸಲಾಗಿತ್ತು. 25,000 ರು ಜಾಮೀನು ಹಣ ನೀಡಿ ಹೊರಬಂದ ಹರಿಪ್ರಸಾದ್ ರ ವಿದೇಶ ಪ್ರವಾಸಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.

ಭಾರತೀಯ ಚುನಾವಣಾ ಆಯೋಗದ ಅಧಿಕಾರಿ, ಸರ್ಕಾರಿ ಪ್ರತಿನಿಧಿಗಳಲ್ಲದೆ ಮೂರನೇ ವ್ಯಕ್ತಿಯೊಬ್ಬರು ಇವಿಎಂ ಬಗ್ಗೆ ಅದರಲ್ಲೂ ಇವಿಎಂನ ನ್ಯೂನ್ಯತೆ ಕಂಡು ಹಿಡಿದವರು ಉಪನ್ಯಾಸ ನೀಡುತ್ತಿರುವುದು ವಿಶೇಷವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X