ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಕ್ ಬೆರ್ರಿ ನಂತರ ಗೂಗಲ್ ಮೇಲೆ ಕಣ್ಣು

By Mahesh
|
Google Oneindia Kannada News

Google and Skype face India ban
ನವದೆಹಲಿ, ಆ.31: ಕೆನಡಾ ಮೂಲದ ರೀಸರ್ಚ್ ಇನ್ ಮೋಷನ್ (RIM ) ನ ಬ್ಲಾಕ್ ಬೆರ್ರಿ ಸೇವೆಗಳನ್ನು ಸರ್ಕಾರೀ ಭದ್ರತಾ ಏಜೆನ್ಸಿಗಳ ತಪಾಸಣೆಗೊಳಪಡಿಸಲು ತಾನು ಬಧ್ದವಿರುವದಾಗಿ ರಿಮ್ ಸೋಮವಾರ ಸರ್ಕಾರಕ್ಕೆ ತಿಳಿಸಿದೆ .

ಭಯೋತ್ಪಾದನಾ ಹಾಗೂ ದೇಶ ದ್ರೋಹಿ ಚಟುವಟಿಕೆಗಳಿಗೆ ಬ್ಲಾಕ್ ಬೆರ್ರಿಯನ್ನು ಬಳಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸರ್ಕಾರ ತಪಾಸಣೆಗೆ ಅವಕಾಶ ಕಲ್ಪಿಸುವಂತೆ ರಿಮ್ ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದು ಸೆಪ್ಟೆಂಬರ್ 1 ರಿಂದ ಇದರ ಸೇವೆಗಳನ್ನು ಸ್ಥಗಿತಗೊಳಿಸುವದಾಗಿಯೂ ಗಡುವು ನೀಡಿತ್ತು.

ಸರ್ಕಾರದ ಎಚ್ಚರಿಕೆಗೆ ಸ್ಪಂದಿಸಿರುವ ರಿಮ್ ತಪಾಸಣೆಗೆ ಅವಕಾಶ ಕಲ್ಪಿಸಿದ್ದು, ದೂರ ಸಂಪರ್ಕ ಇಲಾಖೆ ನೀಡುವ ವರದಿಯ ಆಧಾರದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಮುಂದಿನ ಎರಡು ತಿಂಗಳು ಗಡುವು ವಿಸ್ತರಿಸುವ ಸಂಭವವಿದೆ. ಅಲ್ಲದೆ ರಿಮ್ ಭಾರತದಲ್ಲೇ ತನ್ನ ಸರ್ವರ್ ಸ್ಥಾಪಿಸುವದಾಗಿಯೂ ಭರವಸೆ ನೀಡಿದೆ.

ಬ್ಲಾಕ್ ಬೆರ್ರಿ ನಂತರ ಸರ್ಕಾರ ಇದೀಗ ತನ್ನ ದೃಷ್ಟಿಯನ್ನು ಜಾಗತಿಕ ಅಂತರ್ಜಾಲ ಸೇವೆ ಒದಗಿಸುವ ದೈತ್ಯ ಕಂಪೆನಿ ಗೂಗಲ್ ಮತ್ತು ಸ್ಕೈಪ್ ಮೇಲೆ ಬಿದ್ದಿದೆ. ಭದ್ರತಾ ಕಾರಣಗಳಿಗಾಗಿ ಗೂಗಲ್ ಹಾಗೂ ಇಂಟರ್ ನೆಟ್ ಟೆಲಿಫೋನ್ ಸೇವೆ ಒದಗಿಸುವ ಸ್ಕೈಪ್ ಕಂಪೆನಿಗಳಿಗೆ ತಪಾಸಣೆಗೆ ಅವಕಾಶ ಕಲ್ಪಿಸುವಂತೆ ಹಾಗೂ ಭಾರತದಲ್ಲಿ ಸರ್ವರ್ ಸ್ಥಾಪಿಸುವಂತೆ ಆದೇಶಿಸಲಿವೆ.

ಹಿರಿಯ ದೂರಸಂಪರ್ಕ ಅಧಿಕಾರಿಯೊಬ್ಬರು ಈ ವಿಷಯವನ್ನು ತಿಳಿಸಿದ್ದು ಭದ್ರತೆ ವಿಷಯದಲ್ಲಿ ತಾರತಮ್ಯ ಮಾಡಲು ಸಾದ್ಯವಿಲ್ಲ ಎಂದು ಹೇಳಿದ್ದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೆಟ್ ವರ್ಕ್ ಗಳೂ ಕಾನೂನು ಜಾರಿ ಅಧಿಕಾರಿಗಳಿಗೆ ತಪಾಸಣೆಗೆ ಅವಕಾಶ ಕಲ್ಪಿಸಲೇಬೇಕು ಅಲ್ಲದೆ ದೇಶದಲ್ಲಿ ಸರ್ವರ್ ಸ್ಥಾಪಿಸಲೇಬೇಕು ಇಲ್ಲದಿದ್ದರೆ ಸರ್ಕಾರ ಸೇವೆಗಳನ್ನು ಸ್ಥಗಿತಗೊಳಿಸಲಿದೆ ಎಂದರು. ಬ್ಲಾಕ್ ಬೆರ್ರಿ ಸರ್ಕಾರದ ಎಚ್ಚರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಂತರ ಈ ಬೆಳವಣಿಗೆ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X