ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಉತ್ತರಾಧಿಕಾರಿ ನಾನಲ್ಲ :ನೂಯಿ

By Mahesh
|
Google Oneindia Kannada News

Nooyi is not in a race to succeed Ratan Tata
ನವದೆಹಲಿ, ಆ.30:'ಇಂದ್ರಾನೂಯಿಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾರ ಉತ್ತರಾಧಿಕಾರಿಯಾಗುತ್ತಾರೆ' ಎಂಬ ವದಂತಿಯನ್ನು ಪೆಪ್ಸಿಕೋ .ಲಿನ ಸಿಇಒ ಇಂದಿರಾ ನೂಯಿ ತಳ್ಳಿ ಹಾಕಿದ್ದಾರೆ.

ವಿಶ್ವದ ಅತ್ಯಂತ ದೊಡ್ಡ ಕಂಪೆನಿಗಳಲ್ಲಿ ಒಂದಾದ ಪೆಪ್ಸಿಕೋ ಬಗ್ಗೆ ಹೆಮ್ಮೆಯಿದೆ. ಕಂಪೆನಿ ವಾರ್ಷಿಕ ಆದಾಯ 60 ಬಿಲಿಯನ್ ಯುಎಸ್ ಡಾಲರ್ ನಷ್ಟಿದೆ. 2,85,000 ಉದ್ಯೋಗಿಗಳಿದ್ದಾರೆ. ಹಾಗಾಗಿ ಕಂಪೆನಿ ಅಧ್ಯಕ್ಷತೆಯ ಹೊಣೆ ಮೇಲೆ ತನಗೆ ಪ್ರೀತಿಯಿದೆ ಎಂದು ಇಂದಿರಾ ನೂಯಿ ಭಾನುವಾರ ಇಲ್ಲಿ ಸುದ್ದಿಗಾರರು ವದಂತಿ ಬಗ್ಗೆ ಕೇಳಿದಾಗ ಉತ್ತರಿಸಿದರು.

ಟಾಟಾಗ್ರೂಪ್ ಮೇರು ಸದೃಶ ಕಂಪೆನಿ. ಅದರ ಅಧ್ಯಕ್ಷ ರತನ್ ಟಾಟಾ ಅಗಾಧ ಸಾಮರ್ಥ್ಯವುಳ್ಳವರು. ಅವರ ಉತ್ತರಾಧಿಕಾರಿಗಳಿಗೆ ಭಾರೀ ಸಾಮಥ್ಯ ಇರಲೇಬೇಕು. ಏಕೆಂದರೆ ಟಾಟಾ ಸಂಸ್ಥೆ ರಾಷ್ಟ್ರ ನಿರ್ಮಾಣ ಉದ್ಯಮವೆಂದು ನೂಯಿ ಅಭಿಪ್ರಾಯಪಟ್ಟರು.

ರತನ್ ಟಾಟಾ ಅವರ ಮಲ ಸಹೋದರ 52 ವರ್ಷದ ನೋಯೆಲ್ ಟಾಟಾ ಅವರು ಟಾಟಾ ಸಂಸ್ಥೆ ಮುಖ್ಯಸ್ಥರಾಗುವರೆಂದು ಇದೀಗ ಕೇಳಿ ಬರುತ್ತಿದೆ. ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚಿಯಲ್ಲಿ ರತನ್ ಟಾಟಾ ತನ್ನ ಜವಾಬ್ದಾರಿ ಹಸ್ತಾಂತರಿಸುವರೆನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X