ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದಿರು ರಫ್ತು : ಸರಕಾರಕ್ಕೆ ಹೈಕೋರ್ಟ್ ಛೀಮಾರಿ

By Mrutyunjaya Kalmat
|
Google Oneindia Kannada News

Karnataka High Court
ಬೆಂಗಳೂರು, ಆ. 29 : ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ಬಳ್ಳಾರಿಯವರೆಗೆ ಹೋಗಿ ಅದಿರಿನ ಬಗ್ಗೆ ವಿಚಾರಣೆ ನಡೆಸುವುದು ಸಾಧ್ಯವಾಗುತ್ತದೆಯಾದರೆ, ನಿಮ್ಮ ಪೊಲೀಸರಿಗೆ ಏಕೆ ಸಾಧ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ. ಪೊಲೀಸರು ಮಾಡುವ ಕೆಲಸವನ್ನು ಲೋಕಾಯುಕ್ತರು ಮಾಡಬೇಕೆ ಎಂದು ರಾಜ್ಯ ಹೈಕೋರ್ಟ್ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದ 10 ಬಂದರುಗಳಿಂದ ಅದಿರು ರಫ್ತು ಮಾಡಿ ನಿಷೇಧ ಹೊರಡಿಸಿರುವ ಆದೇಶ ಪ್ರಶ್ನಿಸಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯನ್ಯಾಯಮೂರ್ತಿ ಜೆಎಸ್ ಖೇಹರ್ ಮತ್ತು ನ್ಯಾ.ಎಸ್ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಪ್ರಶ್ನೆಯನ್ನು ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರ ಮುಂದಿಟ್ಟಿದೆ.

ಅಕ್ರಮ ಅದಿರಿಗೆ ಸಂಬಂದಪಟ್ಟಂತೆ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದು, ಇನ್ನು ಆರು ತಿಂಗಳೊಳಗೆ ಅಂತಿಮ ವರದಿ ಹೊರಬೀಳುತ್ತದೆ. ಅಲ್ಲಿಯವರೆಗೆ ರಫ್ತು ನಿಷೇಧ ಮಾಡಬೇಕಾಗುತ್ತದೆ ಎಂದು ಹಾರ್ನಳ್ಳಿ ಅವರು ಹೇಳಿದ ಕಾರಣ, ಪೀಠ ಈ ರೀತಿ ಅಸಮಾಧಾನ ವ್ಯಕ್ತಪಡಿಸಿತು. ಎಲ್ಲ ಕೆಲಸಕ್ಕೂ ಲೋಕಾಯುಕ್ತರನ್ನೇ ಅವಲಂಬಿಸುತ್ತಿರಿ. ಸರಕಾರದ ನಡವಳಿಕೆ ಕಂಡರೆ ಯಾವುದೇ ಕೆಲಸ ನಿರ್ವಹಿಸಲು ಅಸಮರ್ಥವಾಗಿದೆ ಎಂದು ಒಪ್ಪಿಕೊಂಡಂತಿದೆ. ಸರಕಾರ ಮಾಡುವ ಕೆಲಸವನ್ನು ಲೋಕಾಯುಕ್ತರೇ ಮಾಡಲಿ ಎಂದರೆ ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಬೇಲೇಕೇರಿ ಬಂದರಿನಿಂದ 8 ಲಕ್ಷ ಟನ್ ಗಳಷ್ಟು ಬೃಹತ್ ಪ್ರಮಾಣದ ಅದಿರು ನಾಪತ್ತೆಯಾಗಿದ್ದರೂ ಇದನ್ನು ಪತ್ತೆ ಹಚ್ಚಲಾಗಲಿಲ್ಲ ಎಂದರೆ ಇದನ್ನು ನಮ್ಮಿಂದ ನಂಬಲು ಆಗುತ್ತಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X