ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದ್ದೇನಹಳ್ಳಿಯಲ್ಲಿ ಕೈಗಾರಿಕಾ ಕೇಂದ್ರ : ಮೊಯ್ಲಿ

By Mrutyunjaya Kalmat
|
Google Oneindia Kannada News

M Veerappa Moily
ಬೆಂಗಳೂರು, ಜು. 29 : ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರಂತ ತಾಂತ್ರಿಕ ಪರಿಣಿತಿ ವ್ಯಕ್ತಿಯನ್ನು ಕೊಡುಗೆಯಾಗಿ ಕೊಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಗೆ 150 ವರ್ಷಗಳ ನಂತರ ಅದೃಷ್ಟ ಖುಲಾಯಿಸಿದೆ. ವಿಶ್ವೇಶ್ವರಯ್ಯನವರು ಕಂಡ ಕನಸನ್ನು ನನಸಾಗಿಸಲು ಕೇಂದ್ರ ಸರಕಾರ ಮುಂದಾಗಿದೆ.

ವಿಶ್ವೇಶ್ವರಯ್ಯ ಅವರ 150ನೇ ಜನ್ಮದಿನಾಚರಣೆಯಾದ ಸೆಪ್ಟೆಂಬರ್ 15 ರಂದು ಯುವ ಜನಾಂಗಕ್ಕೆ ಕೈಗಾರಿಕಾ ಪರಿಣಿತಿಗಾಗಿ ತರಬೇತಿ ಕೇಂದ್ರವನ್ನು ಆರಂಭಿಸುವ ಮೂಲಕ ಮುದ್ದೇನಹಳ್ಳಿಯನ್ನು ಕೈಗಾರಿಕಾ ಗ್ರಾಮವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಮತ್ತು ಚಿಕ್ಕಬಳ್ಳಾಪುರ ಸಂಸದ ಎಂ ವೀರಪ್ಪ ಮೊಯ್ಲಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ಯುಜನತೆಯನ್ನು ತಾಂತ್ರಿಕವಾಗಿ ತರಬೇತಿಗೊಳಿಸುವಂತ ವಿಶ್ವೇಶ್ವರಯ್ಯನವರು ಕಂಡ ಕನಸನ್ನೇ ನನಸು ಮಾಡಲು ಕೇಂದ್ರ ಹೊರಟಿದೆ. ಈ ನಿಟ್ಟಿನಲ್ಲಿ ಮುದ್ದೇನಹಳ್ಳಿಯಲ್ಲಿ ಕೈಗಾರಿಕಾ ತರಬೇತಿ ನೀಡುವ ವಿವಿಧ ಘಟಕ ಮತ್ತು ಕೇಂದ್ರವನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಅಲ್ಲದೇ, ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರವುಳ್ಳ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗುವುದು. ಪ್ರಸ್ತುತ ವಿಶ್ವೇಶ್ವರಯ್ಯ ಅವರ ಭಾವಚಿತ್ರವುಳ್ಳ ಸ್ಟಾಂಪ್ ಗಳು ಲಭ್ಯವಿದ್ದು, ಇನ್ನು ಲಕೋಟೆಗಳು ಸಿಗಲಿವೆ ಎಂದು ಮೊಯ್ಲಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X