ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದರ್ ತೆರೆಸಾ ಜನ್ಮಶತಮಾನೋತ್ಸವಕ್ಕೆ ಚಾಲನೆ

By Mahesh
|
Google Oneindia Kannada News

ಕೋಲ್ಕತ್ತಾ, ಆ.26: ನೊಬೆಲ್ ಶಾಂತಿ ಪುರಸ್ಕಾರ ಪಡೆದಿರುವ ಮದರ್ ತೆರೆಸಾ ಅವರ ಜನ್ಮ ಶತಮಾನೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಮದರ್ ಹೌಸ್ ನಲ್ಲಿ ರೋಮನ್ ಕ್ಯಾಥೊಲಿಕ್ ನ ಸಂಪ್ರದಾಯಗಳ ಅನುಸಾರ ನಡೆದ ದಿವ್ಯ ಬಲಿಪೂಜೆ ಮುಖಾಂತರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ಪೋಪ್ ಬೆನೆಡಿಕ್ಟ್ 16 ಅವರು ಕಳಿಸಿದ ಸಂದೇಶವನ್ನು ಮಿಷನರಿ ಆಫ್ ಚಾರಿಟಿಯ ಹಿರಿಯ ಸಂಚಾಲಕಿ ಹಾಗೂ ಮುಖ್ಯಸ್ಥರಾದ ಸಿಸ್ಟರ್ ಪ್ರೇಮಾ ಓದಿದರು.

ಸುಮಾರು 60 ಕ್ಕೂ ಪಾದ್ರಿಗಳು ಈ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಶಾಂತಿ ಹಾಗೂ ಪ್ರೀತಿಯ ಸಂಕೇತವಾಗಿ ಬಣ್ಣದ ಬಲೂನ್ ಗಳು ಹಾಗೂ ಪಾರಿವಾಳಗಳನ್ನು ಆಕಾಶಕ್ಕೆ ಹಾರಿ ಬಿಡಲಾಯಿತು.

ಮದರ್ ತೆರೆಸಾ ಅವರ 100ನೇ ಹುಟ್ಟುಹಬ್ಬದ ಅಂಗವಾಗಿ ಅಮರ್ ಚಿತ್ರ ಕಥಾದವರು ಹೊಸ ಮಾಲಿಕೆಯ 40 ಪುಟಗಳ ಚಿತ್ರ ಕಥೆ ಪುಸ್ತಕಗಳನ್ನು ಇಂದು ಹೊರತಂದಿದ್ದಾರೆ.

ವಿಶ್ವದೆಲ್ಲೆಡೆ ಮದರ್ ಶತಮಾನೋತ್ಸವ ಆಚರಿಸಲಾಗುತ್ತಿದೆ. ಟೈಮ್ಸ್ ಸ್ಕ್ವೇರ್ ನಲ್ಲಿ ಮದರ್ ಸಂದೇಶಗಳನ್ನು ಸಾರುವ ಫಲಕಗಳನ್ನು ಹಾಕಲಾಗಿದೆ. ಸಂಜೆ ವೇಳೆ ಅಲಂಕಾರಿಕ ದೀಪಗಳಿಂದ ಟೈಮ್ಸ್ ಚೌಕ ಕಂಗೊಳಿಸಿದೆ. ಎಂಪೈರ್ ಸ್ಟೇಟ್ ಕಟ್ಟಡದವರು ಯಾಕೋ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಮನಸ್ಸು ಮಾಡಿಲ್ಲ ಎಂದು ಸುದ್ದಿ ಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X