ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಂತ ಖರ್ಚಿನಲ್ಲಿ 1000 ಮನೆಗಳ ನಿರ್ಮಾಣ

By Mrutyunjaya Kalmat
|
Google Oneindia Kannada News

Rajeev Chandrasekhar
ಬೆಂಗಳೂರು, ಆ. 27 : ನೆರೆಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಆಸರೆ ಯೋಜನೆಯ ಸಂಯೋಜಕರಾಗಿರುವ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್ ಅವರು ರಾಯಚೂರು ನೆರೆಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಸ್ವಂತ ಖರ್ಚಿನಲ್ಲಿ ಒಂದು ಸಾವಿರ ಮನೆ ಕಟ್ಟಿಸಿಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ಕಾರ್ಪೋರೇಟ್ ಕಂಪನಿಗಳನ್ನು ಆಸರೆ ಯೋಜನೆಯಲ್ಲಿ ತೊಡಗಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಅವರು, 50ಕ್ಕೂ ಹೆಚ್ಚು ಕಂಪನಿಗಳಿಂದ 800 ಕೋಟಿ ರುಪಾಯಿ ದೇಣಿಗೆಯ ವಾಗ್ದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವತಃ ಕಾರ್ಪೋರೇಟ್ ಉದ್ಯಮಿಯಾಗಿರುವ ರಾಜೀವ್ ಚಂದ್ರಶೇಖರ್ ಈಗ ತಾವೇ ಮನೆಗಳನ್ನು ನಿರ್ಮಿಸಲು ಮುಂದಾಗಿರುವುದು ಸೂರಿಗಾಗಿ ವರ್ಷಗಟ್ಟಲೆ ಕಾಯುತ್ತಾ ಕುಳಿತಿರುವ ಸಂತ್ರಸ್ತರ ಮುಖದಲ್ಲಿ ಮಂದಹಾಸ ಮೂಡಿರುವುದು ಸುಳ್ಳಲ್ಲ.

ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ದೇಣಿಗೆಯ ಬದಲು ನೇರವಾಗಿ ನೆರವು ಕಲ್ಪನೆ ರಾಷ್ಟ್ರದಲ್ಲೇ ಇದೇ ಪ್ರಥಮವಾಗಿದೆ. ಕಾರ್ಪೋರೇಟ್ ಸಂಸ್ಥೆಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ಸಾರ್ವಜನಿಕರಿಗೆ ನೆರವಾಗಬಹುದು. ಈ ಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ರಾಜೀವ ಚಂದ್ರಶೇಖರ್ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X