ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀತೆಯಷ್ಟೇ ಪರಿಶುದ್ಧ : ಅಗ್ನಿಪರೀಕ್ಷೆಗೆ ಸಿದ್ಧ

By Mrutyunjaya Kalmat
|
Google Oneindia Kannada News

Minister Ramachandra Gowda
ಬೆಂಗಳೂರು, ಆ. 27 : ಮೈಸೂರು ಮತ್ತು ಹಾಸನ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ. ಈ ವಿಷಯದಲ್ಲಿ ನಾನು ಸೀತೆಯಷ್ಟೇ ಪರಿಶುದ್ಧ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಕಾಲೇಜಿಗೆ 8- ಮತ್ತು ಹಾಸನ ಕಾಲೇಜಿಗೆ 307 ಮಂದಿಯನ್ನು ನೇಮಕ ಮಾಡಿಕೊಂಡಿದ್ದು, ಅದನ್ನು ಮುಖ್ಯಮಂತ್ರಿ ರದ್ದುಪಡಿಸಿರುವ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ರದ್ದುಪಡಿಸಿದ್ದರೆ ಅದನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುವುದಾಗಿ ಅವರು ಹೇಳಿದರು.

ಆಗಿರುವ ನೇಮಕವನ್ನು ರದ್ದುಪಡಿಸುವುದರ ಬದಲು ತನಿಖೆ ನಡೆಸಲಿ. ಆನಂತರ ಮುಂದೇನಾಗುತ್ತದೆ ಎನ್ನುವುದರ ಮೇಲೆ ಕ್ರಮಕೈಗೊಳ್ಳಲಿ. ನನ್ನ ಪ್ರಕಾರ ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಗೌಡ ವಿವರಿಸಿದರು.

ವೈದ್ಯಕೀಯ ಕಾಲೇಜುಗಳು ಸ್ವಾಯತ್ತತೆ ಸಂಸ್ಥೆಗಳಾಗಿದ್ದರಿಂದ ಹಲವಾರು ಇಲಾಖೆಗಳಿಗೆ ಕಡತಗಳನ್ನು ಕಳುಹಿಸಿ ಅನುಮತಿ ಪಡೆಯುವುದರಿಂದ ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ತರಾತುರಿಯಲ್ಲಿ ತುರ್ತು ಕ್ರಮ ಅನುಸರಿಸಲಾಗಿದೆ. ಹೀಗಾಗಿ ಇದರಲ್ಲಿ ಅಕ್ರಮ, ಅವ್ಯವಹಾರ ಅಥವಾ ಸ್ವಜನ ಪಕ್ಷಪಾತ ನಡೆದಿಲ್ಲ ಎಂದು ರಾಮಚಂದ್ರಗೌಡ ಸಮರ್ಥಿಸಿಕೊಂಡರು.

ಮೈಸೂರು ಮತ್ತು ಹಾಸನ ವೈದ್ಯಕೀಯ ಕಾಲೇಜುಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲ ನೇಮಕಾತಿಯನ್ನು ರದ್ದುಪಡಿಸುವಂತೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳ ನಿಲುವು ವಿರೋಧಿಸಿ ನೇಮಕವಾಗಿರುವ ಉದ್ಯೋಗಿಗಳಿಂದ ವ್ಯಾಪಕ ಪ್ರತಿಭಟನೆ ಆರಂಭವಾಗಿದೆ. ಕೆಲವರು ಅತ್ಮಹತ್ಯೆಗೂ ಯತ್ನಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X