ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೀಡಾಂಗಣ ಸ್ಫೋಟ :ಮದನಿ ಕೈವಾಡ ಇಲ್ಲ

By Mahesh
|
Google Oneindia Kannada News

Bidari denies madani role in stadium blasts
ಬೆಂಗಳೂರು, ಆ.26: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಅವಳಿ ಸ್ಫೋಟದಲ್ಲಿ ಪಿಡಿಪಿ ನಾಯಕ ಅಬ್ದುಲ್ ಮದನಿ ಕೈವಾದ ಎಂಬ ಗೃಹ ಸಚಿವ ವಿಎಸ್ ಆಚಾರ್ಯರ ಹೇಳಿಕೆಯನ್ನು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅಲ್ಲಗಳೆದಿದ್ದಾರೆ.

ಸರಣಿ ಬಾಂಬ್ ಸ್ಫೋಟದಲ್ಲಿ ಮದನಿ ಪತ್ನಿ ಸೋಫಿಯಾ ಭಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆಕೆಯನ್ನು ಕರೆತಂದು ವಿಚಾರಣೆ ನಡೆಸಿದಾಗ ಮದನಿ ಕೈವಾಡವಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿ, ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.

ಸದ್ಯಕ್ಕೆ ಸರಣಿ ಸ್ಫೋಟ ಪ್ರಕರಣ ಕುರಿತು ಮದನಿ ವಿಚಾರಣೆ ನಡೆಯುತ್ತಿದ್ದು, ಪೊಲೀಸ್ ವಶದಲ್ಲಿರುವ ಮದನಿ ಅವಧಿ ಆ.26ಕ್ಕೆ ಅಂತ್ಯವಾಗಲಿದೆ. ಅಗತ್ಯ ಬಿದ್ದಲ್ಲಿ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿ ವಿಚಾರಣೆ ಅವಧಿ ವಿಸ್ತರಿಸಲಾಗುವುದು ಎಂದು ಶಂಕರ್ ಬಿದರಿ ಹೇಳಿದರು. ಮದನಿಯನ್ನು ಕೊಲ್ಲಂನಲ್ಲಿ ಆ.17ರಂದು ಬಂಧಿಸಿ, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಏಪ್ರಿಲ್ 17ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣ(KSCA)ದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಮೈದಾನದ ಹೊರಗೆ ಎರಡು ಸ್ಫೋಟಗಳು ಸಂಭವಿಸಿದ್ದವು. ಆಮೇಲೆ ಕ್ರೀಡಾಂಗಣದ ಸುತ್ತಾ ಅನೇಕ ಸಜೀವ ಬಾಂಬ್ ಗಳು ಸಹ ಪತ್ತೆಯಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X