• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಮೇಲ್ ನಿಂದ ನೇರವಾಗಿ ದೂರವಾಣಿ ಕರೆ ಮಾಡಿ

By Prasad
|

ನ್ಯೂಯಾರ್ಕ್, ಆ. 26 : ಈ-ಮೇಲ್ ಮುಖಾಂತರ ಸ್ನೇಹಿತರಿಗೆ, ನೆಂಟರಿಗೆ, ಪರಿಚಯದವರಿಗೆ ನೇರವಾಗಿ ದೂರವಾಣಿ ಕರೆ ಮಾಡುವುದು ಸಾಧ್ಯವೆ? ಸರ್ಚ್ ಇಂಜಿನ್ ದೈತ್ಯ ಗೂಗಲ್ ಕಂಪನಿ ತನ್ನ ಈ-ಮೇಲ್ ಸೇವೆ ಜಿಮೇಲ್ ನಿಂದ ಇದನ್ನು ಸಾಧ್ಯವಾಗಿಸಿದೆ.

ಜಿಮೇಲ್ ಬಳಕೆದಾರರು ಇನ್ನು ಮುಂದೆ ಈ-ಮೇಲ್ ಮುಖಾಂತರವೇ ನೇರವಾಗಿ ಇತರರಿಗೆ ಟೆಲಿಫೋನ್ ಕರೆಗಳನ್ನು ಮಾಡಬಹುದು. ಅಮೆರಿಕ ಮತ್ತು ಕೆನಡದಲ್ಲಿರುವ ಜಿಮೇಲ್ ಬಳಕೆದಾರರು 2010ರಲ್ಲಿ ಉಚಿತವಾಗಿ ಕರೆಗಳನ್ನು ಮಾಡಬಹುದು. ಆದರೆ, ಇತರ ದೇಶಗಳಲ್ಲಿರುವವರು ಈ ಸೇವೆ ಬಳಸಿಕೊಳ್ಳಲು ಅಲ್ಪ ಮೊತ್ತವನ್ನು ತೆತ್ತಬೇಕು.

ಚಾಟಿಂಗ್ ಪಟ್ಟಿಯಲ್ಲಿರುವ ಸ್ನೇಹಿತರಿಗೆ 'ಕಾಲ್ ಫೋನ್' ಬಟನ್ ಕ್ಲಿಕ್ ಮಾಡಿ ಫೋನ್ ನಂಬರ್ ಅಥವಾ ಹೆಸರು ನಮೂದಿಸಿ ಸಂಭಾಷಣೆಯನ್ನು ಆರಂಭಿಸಬಹುದು. ಆನ್ ಲೈನ್ ಖಾತೆ ಬಳಸಿ ಹಣ ಸಂದಾಯ ಮಾಡಬಹುದಾಗಿದೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ವಿನೂತನ ಸೇವೆ ನೀಡುವ ಮುಖಾಂತರ ವೆಬ್ ಕಾಲಿಂಗ್ ಸೇವೆ ನೀಡುತ್ತಿರುವ ಸ್ಕೈಪ್ ಮತ್ತು ಎಟಿ ಅಂಡ್ ಟಿ ಹಾಗು ವೆರಿಜೋನ್ ಕಮ್ಯುನಿಕೇಷನ್ಸ್ ಕಂಪನಿಗಳಿಗೆ ನೇರವಾಗಿ ಪೈಪೋಟಿಗೆ ಗೂಗಲ್ ಇಳಿದಿದೆ.

ತುಂಟ ಪ್ರಶ್ನೆ : ಪ್ರಿಯತಮ ಪ್ರಿಯತಮೆಗೆ ಜಿಮೇಲ್ ಮುಖಾಂತರ ಫೋನ್ ಮಾಡಬೇಕಿದ್ದರೆ, 'ಈ-ಮೇಲ್ ಮುಖಾಂತರ ಫಿಮೇಲ್ ಗೆ ನೇರ ಕರೆ' ಎಂದು ಕರೆಯಬಹುದೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X