ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲೊಂದು ವಿಶ್ವ ವ್ಯಾಪಾರ ಕೇಂದ್ರ

By Mrutyunjaya Kalmat
|
Google Oneindia Kannada News

Bangalore World Trade Centre
ಬೆಂಗಳೂರು, ಆ. 26 : ಸುಮಾರು 91 ರಾಷ್ಟ್ರಗಳಲ್ಲಿ ಅಸ್ತಿತ್ವ ಹೊಂದಿರುವ ವಿಶ್ವ ವ್ಯಾಪಾರ ಕೇಂದ್ರ(ಡಬ್ಲ್ಯೂಟಿಸಿ) ಶೀಘ್ರದಲ್ಲಿ ಬೆಂಗಳೂರಿನಲ್ಲಿ ತಲೆಎತ್ತಲಿದೆ. ಬೆಂಗಳೂರಿನ ಇಸ್ಕಾನ್ ದೇವಸ್ಥಾನದ ಬಳಿ ಇರುವ ಕೇಂದ್ರದ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಮುಂದಿನ 10 ತಿಂಗಳೊಳಗೆ ಕಾರ್ಯಾರಂಭಿಸುವ ನಿರೀಕ್ಷೆಯಿದೆ.

ಡಬ್ಲ್ಯೂಟಿಸಿ ಆರಂಭಕ್ಕೆ ಅಗತ್ಯವಾದ ಎಲ್ಲ ಪರವಾನಿಗಿಗಳನ್ನು ಪಡೆಯಲಾಗಿದೆ. ಈ ಕೇಂದ್ರದ ಮೂಲಕ ನಗರದ ವಹಿವಾಟುಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆಯಲಿದೆ. ಅನೇಕ ವಿದೇಶಿ ಕಂಪನಿಗಳ ಜೊತೆಗೆ ಸ್ವದೇಶಿ ಕಂಪನಿಗಳು ಈ ತಾಣದಲ್ಲಿ ವಹಿವಾಟು ಆರಂಭಿಸಲು ಮಾತುಕತೆ ನಡೆಸಿವೆ ಎಂದು ಕೇಂದ್ರದ ಒಕ್ಕೂಟಗಳ ನಿರ್ದೇಶಕ ರಾಬರ್ಟ್ ಜೆ ಫುಹ್ ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮದ ಬ್ರಿಗೇಡ್ ಸಮೂಹ ಕೇಂದ್ರಕ್ಕೆ ಬೇಕಾದ ಮೂಲಸೌಕರ್ಯ ಸೇವೆ ಒದಗಿಸುತ್ತದೆ. ಇಸ್ಕಾನ್ ಹಾಗೂ ಮೆಟ್ರೋ ನಡುವಣ 40 ಎಕರೆ ಜಾಗದಲ್ಲಿ 30 ಅಂತಸ್ತಿನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುತ್ತಿದೆ. 1,000 ಕೋಟಿ ರುಪಾಯಿಗಳ ಬಂಡವಾಳದೊಂದಿಗೆ 10 ಲಕ್ಷ ಚದರ ಅಡಿಯ ಕಟ್ಟಡ ನಿರ್ಮಾಣವಾಗುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಟ್ಟಡ ಸೇವೆಗೆ ಲಭ್ಯವಾಗಲಿದೆ ಎಂದು ಬ್ರಿಗೇಡ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕಎಂ ಆರ್ ಜೈಶಂಕರ್ ತಿಳಿಸಿದ್ದಾರೆ.

ಮೂರೂವರೆ ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ರಾಜ್ಯ ಸರಕಾರದಿಂದ ಡಬ್ಲ್ಯೂಟಿಸಿಗೆ ಬೇಕಾಗಿರುವ ಎಲ್ಲ ಬಗೆಯ ಪರವಾನಿಗಿಯನ್ನು ಪಡೆದುಕೊಂಡಿದ್ದೇವೆ ಎಂದು ಜೈಶಂಕರ್ ವಿವರಿಸಿದ್ದಾರೆ.

ಏನಿದು ವಿಶ್ವ ವ್ಯಾಪಾರ ಕೇಂದ್ರ ?
: ಸೆಪ್ಟೆಂಬರ್ 11, 2001 ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಭಯೋತ್ಪಾದಕರ ದಾಳಿ ಎಂಬ ಸುದ್ದಿ ವಿಶ್ವದೆಲ್ಲೆಡೆ ಬಿತ್ತರವಾಗುತ್ತಿತ್ತು. ಅಲ್ಲಿಂದ ಅಮೆರಿಕದಲ್ಲಿರುವ ಏಳು ವಿಶ್ವ ವ್ಯಾಪಾರಿ ಕೇಂದ್ರಗಳು ಜನಪ್ರಿಯವಾದವು. ಇಂಥ ವ್ಯಾಪಾರ ಕೇಂದ್ರವನ್ನು ನಿರ್ವಹಿಸುತ್ತಿರುವುದು ವಿಶ್ವ ವ್ಯಾಪಾರ ಒಕ್ಕೂಟ. ಸುಮಾರು 91 ರಾಷ್ಟ್ರಗಳಲ್ಲಿ ಅಸ್ತಿತ್ವ ಹೊಂದಿರುವ ವಿಶ್ವ ವ್ಯಾಪಾರ ಕೇಂದ್ರ 316 ನಗರಗಳಲ್ಲಿ ಚಟುವಟಿಕೆ ನಡೆಸುತ್ತಿದೆ.

ಒಕ್ಕೂಟ 88 ರಾಷ್ಟ್ರಗಳಲ್ಲಿ, 287 ಅಂಗಸಂಸ್ಥೆಗಳನ್ನು ಹೊಂದಿವೆ. ಸುಮಾರು 7,50,000 ಕ್ಕೂ ಹೆಚ್ಚು ಕಂಪನಿಗಳ ಒಕ್ಕೂಟ ಅಧೀನದಲ್ಲಿ ವಹಿವಾಟು ನಡೆಸುತ್ತಿವೆ. ತನ್ನ ಸದಸ್ಯರಿಗೆ ವಿಶ್ವ ಮಟ್ಟದ ವಹಿವಾಟು ನೀಡುವುದು ಒಕ್ಕೂಟದ ಪ್ರಮುಖ ಧ್ಯೇಯ. ಈ ವ್ಯಾಪಾರಿ ತಾಣದಲ್ಲಿ ಮುಖ್ಯವಾಗಿ ಅಂತಾರಾಷ್ಟ್ರೀಯ ಕಂಪನಿಗಳು ಕಂಡುಬರುತ್ತಿವೆ. ನಾನಾ ದೇಶಗಳ ಕಂಪನಿಗಳು ಒಂದೇ ಸೂರಿನಡಿ ನೋಡಲು ಸಿಗುತ್ತವೆ. ಸದಸ್ಯರ ನಡುವೆ ಸಹಕಾರ ಮತ್ತು ಪ್ರೋತ್ಸಾಹ ನೀಡುವುದು ಮುಖ್ಯ ಉದ್ದೇಶ. 24 ಅಂತಾರಾಷ್ಟ್ರೀಯ ನಿರ್ದೇಶಕರ ಮಂಡಳಿಯೊಂದಿಗೆ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ ಎಂದು ಒಕ್ಕೂಟ ಮುಖ್ಯಸ್ಥ ರಾಬರ್ಟ್ ಹೇಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X