ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ತಲ್ ಕಂಪೆನಿ ವಿರುದ್ಧ ಆಹೋರಾತ್ರಿ ಪ್ರತಿಭಟನೆ

By * ರೋಹಿಣಿ, ಬಳ್ಳಾರಿ
|
Google Oneindia Kannada News

Karnataka Farmers Association protest against Mittal company
ಬಳ್ಳಾರಿ, ಆ. 25: ಕುಡತಿನಿ ಬಳಿ ನಿರ್ಮಾಣ ಆಗುತ್ತಿರುವ ಲಕ್ಷ್ಮೀ ಮಿತ್ತಲ್ ಮತ್ತು ಬ್ರಹ್ಮಿಣಿ ಕೈಗಾರಿಕೆಗಳಿಗಾಗಿ ಸರ್ಕಾರ ಸ್ವಾಧೀನ ಮಾಡಿಕೊಳ್ಳುತ್ತಿರುವ ಭೂಮಿಗೆ ಪ್ರತೀ ಎಕರೆಗೆ 77ಲಕ್ಷ ರು. ಪರಿಹಾರ ನೀಡಲು ಆಗ್ರಹಿಸಿ ಆಗಸ್ಟ್ 30 ರ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು '24 ತಾಸುಗಳ ಆಹೋರಾತ್ರಿ' ಪ್ರತಿಭಟನೆ ನಡೆಸಲು ಭೂ ಸಂತ್ರಸ್ತರು ನಿರ್ಧರಿಸಿದ್ದಾರೆ.

ಈ ಕೈಗಾರಿಕೆಗಳ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಂಚಾಲಕ ಎಂ. ಬಸವರಾಜ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಡತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು, ಎರ್ರಂಗಳಿ, ಸಿದ್ಧಮ್ಮನಹಳ್ಳಿ ಗ್ರಾಮಗಳ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 30 ರ ಸೋಮವಾರ ಬೆಳಗ್ಗೆ 10ಗಂಟೆಗೆ ಪ್ರತಿಭಟನೆ ಪ್ರಾರಂಭ. ಆಗಸ್ಟ್ 31ರ ಮಂಗಳವಾರ ಬೆಳಗ್ಗೆ 10ಗಂಟೆಗೆ ಪ್ರತಿಭಟನೆ ಮುಕ್ತಾಯ ಆಗಲಿದೆ ಎಂದು ಅವರು ಹೇಳಿದರು.

ಕುಡತಿನಿ ಗ್ರಾಮವು ಈಗಾಗಲೇ ವಾಡಾ ವ್ಯಾಪ್ತಿಗೆ ಸೇರಿದೆ. ಈ ಗ್ರಾಮದ ಆಸುಪಾಸಿನಲ್ಲಿ ಪ್ರತಿ 30X40 ನಿವೇಶನಕ್ಕೆ 8 ರಿಂದ 15 ಲಕ್ಷ ರು. ಬೆಲೆ ಇದೆ. ಈ ಕಾರಣಕ್ಕಾಗಿ ರೈತರು ಭೂಮಿಯಲ್ಲಿ ಭಾರೀ ಯೋಜನೆಗಳಿಗೆ ನೀಡುತ್ತಿದ್ದು ಸರ್ಕಾರ - ಜಿಲ್ಲಾಡಳಿತ ಪ್ರತೀ ಎಕರೆಗೆ ಕನಿಷ್ಠ 77ಲಕ್ಷ ರು.ಗಳನ್ನು ಪರಿಹಾರವಾಗಿ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X