ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇದಾಂತ-ಕೇರ್ನ್ ಡೀಲ್ ಗೆ ಸರ್ಕಾರ ಅಡ್ಡಗಾಲು?

By Mahesh
|
Google Oneindia Kannada News

Vedanta to face govt hurdle in Cairn buy
ನವದೆಹಲಿ, ಆ.24: ಲಂಡನ್ ಮೂಲದ ಅನಿವಾಸಿ ಭಾರತೀಯ ಅನಿಲ್ ಅಗರ್ ವಾಲ್ ಸಮೂಹ 9.6 ಬಿಲಿಯನ್ ಡಾಲರ್ ಹೂಡಿಕೆ ಮೂಲಕ ಕೇರ್ನ್ ಎನರ್ಜಿ(ಇಂಡಿಯಾ)ದ ಬಹುಪಾಲನ್ನು ಖರೀದಿಸಲು ಉದ್ದೇಶಿಸಿರುವ ಬೆನ್ನಲ್ಲೇ ಕೇಂದ್ರ ತೈಲ ಸಚಿವಾಲಯ ಒಎನ್‌ಜಿಸಿಗೂ ಈ ಖರೀದಿಗೆ ಪ್ರಯತ್ನಿಸುವಂತೆ ಸರ್ಕಾರದ ಸೂಚನೆ ಸಿಕ್ಕಿದೆ.

ಇದರಿಂದ ವೇದಾಂತ ಸಮೂಹದ ಖರೀದಿಗೆ ಹಿನ್ನಡೆ ಆಗಲಿದೆ. ಒಎನ್‌ಜಿಸಿ ಈಗ ಕೇರ್ನ್ ನ ರಾಜಾಸ್ತಾನದ ನಿಕ್ಷೇಪದಲ್ಲಿ ಪಾಲುದಾರನೂ ಅಗಿದ್ದು ಶೇ.30ರಷ್ಟು ಪಾಲು ಹೊಂದಿದೆ. ಕೇರ್ನ್ ನ ಖರೀದಿಗೆ ಒಎನ್‌ಜಿಸಿ ಗೂ ಒಂದು ಅವಕಾಶ ನೀಡಬೇಕೆಂದು ತೈಲ ಸಚಿವಾಲಯದ ಹಿರಿಯ ಅಧಿಕಾರಿ ಎಸ್ ಸುಂದರೇಶನ್ ಹೇಳಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ.

ಒಎನ್‌ಜಿಸಿ ಈಗ ಕೇರ್ನ್ ನ ಆಸ್ತಿಯ ಮೌಲ್ಯವನ್ನು ಅಂದಾಜು ಮಾಡುತ್ತಿದ್ದು ಇದು ಪೂರ್ಣಗೊಳ್ಳಲು ಕೆಲ ಸಮಯ ಬೇಕೆನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಲು ವೇದಾಂತ ಮತ್ತು ಕೇರ್ನ್ ವಕ್ತಾರರು ನಿರಾಕರಿಸಿದ್ದಾರೆ.

ವೇದಾಂತ ಹಾಗೂ ಕೇರ್ನ್ ಡೀಲ್ ಸುಮಾರು 8.48 ರಿಂದ 9.6 ಬಿಲಿಯನ್ ಡಾಲರ್ ಮೌಲ್ಯ ಎಂದು ಅಂದಾಜಿಸಲಾಗಿದೆ. ಕೇರ್ನ್ ಖರೀದಿ ಸಫಲವಾದರೆ, ಅನಿವಾಸಿ ಭಾರತೀಯ ಅನಿಲ್ ಅಗರ್ ವಾಲ್ ತನ್ನ ಅಸ್ತಿ ಮೌಲ್ಯವನ್ನು 1,67,000 ಕೋಟಿ ರೂಪಾಯಿಗಳಿಗೆ ಏರಿಸಿಕೊಂಡು ದೇಶದ ಅತಿ ದೊಡ್ಡಕೋಟ್ಯಾಧಿಪತಿಯಾಗಿ ಹೊರಹೊಮ್ಮಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X