ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಸ್ ದೊರೆಗೆ ಹೈದಾರಾಬಾದ್ ನಲ್ಲಿ ಚೆಕ್ಮೇಟ್

By Mrutyunjaya Kalmat
|
Google Oneindia Kannada News

Viswanathan Anand
ಹೈದರಾಬಾದ್, ಆ. 24 : ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಯಾವ ದೇಶದವರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಯಾವ ದೇಶದ ಸಿಟಿಜನ್ ಸಿಪ್ ಹೊಂದಿದ್ದಾರೆ ಎನ್ನುವುದು ಮಾತ್ರ ಗೊತ್ತಿಲ್ಲ. ಆದರೆ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಪ್ರಕಾರ ವಿಶ್ವ ಚದುರಂಗ ಪಟು ವಿಶ್ವನಾಥನ್ ಆನಂದ್ ಅವರು ಸ್ಪೇನ್ ದೇಶದ ಸಿಟಿಜನ್ ಸಿಪ್ ಹೊಂದಿದ್ದಾರಂತೆ?

ಅನೇಕ ಬಾರಿ ವಿಶ್ವಚೆಸ್ ಪ್ರಶಸ್ತಿ ಗೆಲ್ಲುವು ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ ಹಿರಿಯ ಆಟಗಾರನೊಬ್ಬನಿಗೆ ಕೇಂದ್ರ ಸರಕಾರ ನಡೆಸಿಕೊಂಡ ಪರಿ ಇದೆ. ವಿಶ್ವನಾಥನ್ ಆನಂದ್ ಭಾರತದಲ್ಲಿ ನೆಲೆಸುವುದಕ್ಕಿಂತ ಹೆಚ್ಚಾಗಿ ಸ್ಪೇನ್ ನಲ್ಲಿ ವಾಸಿಸುವುದು ಹೆಚ್ಚು. ಹಾಗಂತ ಅವರು ಅಲ್ಲಿನ ಸಿಟಿಜನ್ ಸಿಪ್ ಪಡೆದಿಲ್ಲ. ಹೀಗಿದ್ದಾಗೂ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮಾತ್ರ ವಿಶ್ವನಾಥನ್ ಆನಂದ್ ಅವರು ಭಾರತದ ನಾಗರಿಕ ಅಲ್ಲ ಭಾವಿಸಿದ್ದೆ ವಿವಾದಕ್ಕೆ ಕಾರಣವಾಗಿದೆ.

ಹೈದರಾಬಾದ್ ವಿಶ್ವವಿದ್ಯಾಲಯವು ವಿಶ್ವನಾಥನ್ ಅನಂದ್ ಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಹೀಗಾಗಿ, ಮಾನವ ಸಂಪನ್ಮೂಲ ಇಲಾಖೆ ಅನುಮತಿ ಪಡೆದುಕೊಳ್ಳಲು ಮುಂದಾದಾಗ ಮಾನವ ಸಂಪನ್ಮೂಲ ಇಲಾಖೆ ವಿಶ್ವನಾಥನ್ ಅನಂದ್ ಅವರು ಭಾರತೀಯ ಸಿಟಿಜನ್ ಸಿಪ್ ಹೊಂದಿಲ್ಲ. ಅವರು ಸ್ಪೇನ್ ನಲ್ಲಿ ನೆಲೆಸಿದ್ದಾರೆ ಎಂಬ ವಾದವನ್ನು ಮುಂದಿಟ್ಟಿದೆ. ಇದೇ ಕಾರಣದಿಂದ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಡಾಕ್ಟರೇಟ್ ಗೌರವದ ಕಾರ್ಯಕ್ರಮ ಮುಂದೂಡಲಾಗಿತ್ತು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಶ್ವನಾಥನ್ ಆನಂದ್ ಅವರ ಪತ್ನಿ ಅರುಣಾ, ಸುಮಾರು 15 ವರ್ಷಗಳ ವಿಶ್ವನಾಥನ್ ಆನಂದ ಭಾರತಕ್ಕೆ ಸೇವೆ ಸಲ್ಲಿಸಿದ್ದಾರೆ. ಆದರೆ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅವರಿಗೆ ಈ ರೀತಿಯ ಅಗೌರವ ತೋರಿಸಿರುವುದು ಅಘಾತ ಉಂಟು ಮಾಡಿದೆ ಎಂದು ನೊಂದು ನುಡಿದಿದ್ದಾರೆ. ಮಂಗಳವಾರ ರಾತ್ರಿ ಹೈದಾರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶಿ ಅವರು ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ, ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಕ್ಷಮಿಸಿ ಎಂದ ಸಿಬಲ್ : ವಿಶ್ವನಾಥನ್ ಆನಂದ್ ಭಾರತದ ಹೆಮ್ಮೆಯ ಆಟಗಾರ. ಸಿಟಿಜನ್ ಸಿಪ್ ಸಂಬಂಧಿಸಿದಂತೆ ಹುಟ್ಟಿರುವ ವಿವಾದ ಕಣ್ತಪ್ಪಿನಿಂದ ಆಗಿರುವ ಪ್ರಮಾದ. ನಮಗೂ ಕೂಡಾ ಈ ಬಗ್ಗೆ ತುಂಬಾ ನೋವಾಗಿದೆ. ಘಟನೆಯಿಂದ ಆನಂದ್ ಅವರಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಕಪಿಲ್ ಸಿಬಲ್ ವಿವಾದಕ್ಕೆ ಮಂಗಳ ಹಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X