ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭುವನಸುಂದರಿ ಕಿರೀಟ ಧರಿಸಿದ ಮೆಕ್ಸಿಕೋ ಸುಂದರಿ

By Mrutyunjaya Kalmat
|
Google Oneindia Kannada News

Jimena Navarrete
ಲಾಸ್ ವೆಗಾಸ್, ಆ. 24 : ಮೆಕ್ಸಿಕೋ ಸುಂದರಿ ಜಿಮೇನಾ ನವರಾಟ್ 2010ರ ಸಾಲಿನ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಜಮೈಕಾದ ಯಂಡೀ ಪಿಲಿಫ್ ಪ್ರಥಮ ರನ್ನರ್ ಆಫ್ ಆದರೆ, ಆಸ್ಟ್ರೇಲಿಯಾದ ಜಸ್ಟಿನ್ ಕ್ಯಾಂಬೆಲ್ ದ್ವಿತೀಯ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡರು.

ಅಮೆರಿಕಾದ ಲಾಸ್ ವೆಗಾಸ್ ನಲ್ಲಿ ಸೋಮವಾರ ನಡೆದ ವರ್ಣರಂಜಿತ ಭುವನ ಸುಂದರಿಯರ ಸ್ಪರ್ಧೆಯಲ್ಲಿ 2009ರ ಸಾಲಿನ ಭವನಸುಂದರಿ ವೆನೆಜುವೆಲ್ ನ ಸ್ಟಿಪಾನಿಯಾ ಫರ್ನಾಂಡಿಸ್ ಅವರು 2010ರ ಸಾಲಿನಲ್ಲಿ ಭುವನಸುಂದರಿಯಾಗಿ ಆಯ್ಕೆಯಾಗಿರುವ ಮೆಕ್ಸಿಕೋದ ಜಿಮೇನಾ ನವರಾಟ್ ಅವರಿಗೆ ಕಿರೀಟ ಧರಿಸಿದರು. ಸುಮಾರು 83 ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಅಮೆರಿಕಾ, ಐರ್ಲೆಲ್ಯಾಂಡ್ ಅಥವಾ ವೆನೆಜುವೆಲ್ ನ ಸುಂದರಿಯರು ಈ ಸಲದ ಭುವನಸುಂದರಿ ಪಟ್ಟವನ್ನು ಅಲಂಕರಿಸುತ್ತಾರೆ ಎಂದು ಭವಿಷ್ಯ ನುಡಿಯಲಾಗಿತ್ತು. ಆದರೆ, ಇದೆಲ್ಲವನ್ನೂ ಸುಳ್ಳಾಗಿಸಿದ 22 ರ ಹರೆಯದ ಮೆಕ್ಸಿಕೋದ ಜಿಮೇನಾ ನವರಾಟ್ ಅವರು ಭುವನಸುಂದರಿ ಪ್ರಶಸ್ತಿ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X