ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಾಮಕ್ಕೆ ಉತ್ತೇಜನ

By Mahesh
|
Google Oneindia Kannada News

Rama Jois on CWG 2010
ಬೆಂಗಳೂರು, ಆ.24: ಕಾಮನ್‌ವೆಲ್ತ್ ಗೇಮ್ಸ್ 2010 ಹೆಸರಿನಲ್ಲಿ ಸರ್ಕಾರ ವ್ಯಭಿಚಾರಕ್ಕೆ ಉತ್ತೇಜನ ನೀಡುತ್ತಿದೆ ಎಂಬ ಕೇಂದ್ರದ ಮಾಜಿ ಕ್ರೀಡಾ ಸಚಿವ ಮಣಿಶಂಕರ್ ಅಯ್ಯರ್ ಅವರ ಉಗ್ರ ಟೀಕೆಗೆ ರಾಜ್ಯಸಭಾ ಸದಸ್ಯ ನ್ಯಾ.ಎಂ.ರಾಮಾಜೋಯಿಸ್ ದನಿಗೂಡಿಸಿದ್ದಾರೆ.

ಆಕ್ಟೋಬರ್3ರಿಂದ 14ರವರೆಗೆ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಕ್ರೀಡಾಗ್ರಾಮದಲ್ಲಿ 150 ರಿಂದ 200 ಕಾಂಡೋಮ್ ಮಾರಾಟ ಯಂತ್ರ ಅಳವಡಿಸುವ ನ್ಯಾಕೋ(NACO) ಹೇಳಿಕೆಗೆ ಅವರು ಖೇದ ವ್ಯಕ್ತಪಡಿಸಿದ್ದಾರೆ. ಕ್ರೀಡಾಕೂಟದ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಪಶ್ಚಿಮ ಯೂರೋಪ್ ರಾಷ್ಟ್ರಗಳಿಂದ ಭಾರೀ ಸಂಖ್ಯೆಯಲ್ಲಿ ಯುವತಿಯರು ದಿಲ್ಲಿಗೆ ಆಗಮಿಸುವ ಸಾಧ್ಯತೆ ಇದೆ.

ಇದಕ್ಕಾಗಿಯೇ ಪ್ರಾತಿನಿಧಿಕ ಸಂಸ್ಥೆಗಳು ತಯಾರಿ ನಡೆಸಿವೆ ಎಂಬ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಅಯ್ಯರ್ ಟೀಕಾ ಪ್ರಹಾರ ನಡೆಸಿದ್ದರು. ಅಯ್ಯರ್ ಅವರ ವಾದವನ್ನು ರಾಮಾಜೋಯಿಸ್ ಸಮರ್ಥಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಆಯೋಜಕ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಈ ಕ್ರೀಡಾಕೂಟದ ಮೂಲಕ ಭಾರತೀಯ ಪುರಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವುದಾಗಿ ಹೇಳುತ್ತಾರೆ.

ಅನೈತಿಕ ಚಟೂವಟಿಕೆಗೆ ಆಸ್ಪದ: ಆದರೆ ಗೇಮ್ಸ್ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ಲೈಂಗಿಕ ಚಟುವಟಿಕೆಗಳು ಪರಮ ಪಾತಕ ಕೃತ್ಯ. ಸುಮಾರು 200 ವೆಂಡಿಂಗ್ ಮೆಷಿನ್ ಗಳಿಂದ ಅಂದಾಜು ದಿನವೊಂದಕ್ಕೆ 3 ರಿಂದ 3300ಕಾಂಡೋಮ್ ಪ್ಯಾಕ್‌ಗಳು ಬಳಕೆಯಾಗುತ್ತವೆ ಎಂಬುದಾದರೆ, ಪ್ರತಿ ನಿತ್ಯ ಸುಮಾರು ಒಂದು ಲಕ್ಷ ಕಾಂಡೋಮ್‌ಗಳು ಬಳಸಲ್ಪಟ್ಟಂತಾಯಿತು.

ಹೀಗಾದರೆ ಕ್ರೀಡಾಪಟುಗಳಿಂದ ಬೇರೇನನ್ನು ನಿರೀಕ್ಷಿಸಲು ಸಾಧ್ಯ. ಕ್ರೀಡಾಗ್ರಾಮದಲ್ಲಿ ಕಾಂಡೋಮ್ ಯಂತ್ರ ಅಳವಡಿಕೆಯಿಂದ ಬೇರೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವೆ ಕು.ಶೆಲ್ಜಾ ಅವರಿಗೆ ಅಯ್ಯರ್ ಬರೆದಿರುವ ಪತ್ರವನ್ನು ಉಲ್ಲೇಖಿಸಿರುವ ಜೋಯಿಸ್ ಅವರು, ವ್ಯಭಿಚಾರಕ್ಕೆ ಉತ್ತೇಜನ ಮತ್ತು ವ್ಯಾಪಕ ಭ್ರಷ್ಟಾಚಾರದಿಂದಾಗಿ ದೇಶದ ಪ್ರತಿಷ್ಠೆಗೆ ಧಕ್ಕೆಯಾಗಲಿದೆ ಹೀಗಾಗಿ ಕಾಮನ್ ವೆಲ್ತ್ ಗೇಮ್ಸ್
ವೇಳೆ ಇಂತಹ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಕೇಂದ್ರದ ಪ್ರವಾಸೋದ್ಯಮ ಸಚಿವರನ್ನು ರಾಮಾಜೋಯಿಸ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X