ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಳುವಾರುಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Rajendra
|
Google Oneindia Kannada News

Bolavaru Muhammad Kunhi
ಬೆಂಗಳೂರು, ಆ.22: ಕನ್ನಡದ ಹೆಸರಾಂತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರ 'ಪಾಪು ಗಾಂಧಿ, ಗಾಂಧಿ ಬಾಪು' ಆದ ಕಥೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು 50 ಸಾವಿರ ರು. ನಗದನ್ನು ಒಳಗೊಂಡಿದೆ. ದೆಹಲಿಯಲ್ಲಿ ಪ್ರಶಸ್ತಿಯನ್ನು ನವೆಂಬರ್ ನಲ್ಲಿ ಪ್ರದಾನ ಮಾಡಲಾಗುತ್ತದೆ.

ಮಹಮ್ಮದ್ ಕುಂಞ ಅವರು ಮಕ್ಕಳ ಸಾಹಿತ್ಯಕ್ಕೆ ನೀಡುರುವ ಕೊಡುಗೆ ಅಮೂಲ್ಯವಾದುದು. ದಕ್ಷಿಣ ಕನ್ನಡದ ಪುತ್ತೂರಿನವರಾಗಿದ್ದು ಸದ್ಯಕ್ಕೆ ಬೆಂಗಳೂರಿನಲ್ಲಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಮಹಾಪ್ರಬಂಧಕರಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಂಞ ಅವರ 'ತಟ್ಟು ಚಪ್ಪಾಳೆ ಪುಟ್ಟ ಮಗು' ಮಕ್ಕಳ ಸಾಹಿತ್ಯದ ಶಿಖರಪ್ರಾಯ ಕೃತಿಯಾಗಿದೆ.

ಮುಸ್ಲಿಂ ಲೇಖಕರ ಪಡೆಯಲ್ಲಿ ವಿಶಿಷ್ಟ ಸಂವೇದನೆಯ ಸಾಹಿತಿಯಾಗಿ ಹೊರಹೊಮ್ಮಿದವರು ಕುಂಞ. ಒಂದು ತುಂಡು ಗೋಡೆ, ಆಕಾಶಕ್ಕೆ ನೀಲಿ ಪರದೆ, ದೇವರುಗಳ ರಾಜ್ಯದಲಿ, ಅಂಕ ಅವರ ಗಮನಾರ್ಹ ಕಥಾ ಸಂಕಲನಗಳು. 'ಜಿಹಾದ್' ಅವರ ಪ್ರಮುಖ ಕಾದಂಬರಿ. ಪಿ ಶೇಷಾದ್ರಿ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಚಿತ್ರ 'ಮುನ್ನುಡಿ' ಬೊಳುವಾರು ಅವರ ಕತೆಯನ್ನು ಆಧರಿಸಿದೆ.

"ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ. ಇದರಿಂದ ಮತ್ತೊಂದಷ್ಟು ಜನಕ್ಕೆ ನನ್ನ ಕೃತಿ ತಲುಪಲಿದೆ" ಎಂದು ಬೊಳುವಾರು ಪ್ರತಿಕ್ರಿಯಿಸಿದ್ದಾರೆ. ಈ ಕೃತಿಯಲ್ಲಿ ಮಕ್ಕಳಿಗಾಗಿ ಗಾಂಧಿಯನ್ನು ವಿಶೇಷವಾಗಿ ಪರಿಚಯಿಸಿದ್ದೇನೆ ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X