ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೋಧದ ನಡುವೆಯೂ ವೀಸಾ ಶುಲ್ಕ ಏರಿಕೆ

By Mahesh
|
Google Oneindia Kannada News

US tries to console India over visa fee hike row
ವಾಷಿಂಗ್ಟನ್, ಆ.21:ಮೆಕ್ಸಿಕೋದೊಂದಿಗಿನ ಗಡಿ ಭದ್ರತೆಯನ್ನು ಬಲಗೊಳಿಸಲು ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಉದ್ದೇಶದ ಗಡಿ ಭದ್ರತಾ ಮಸೂದೆ ಅಂಗೀಕಾರ ಪಡೆದಿದ್ದು, ಆ.14ರಿಂದಲೇ ಜಾರಿಗೆ ಬಂದಿದೆ ಎಂದು ಅಮೆರಿಕ ಹೇಳಿದೆ.

ಭಾರತೀಯ ಕಂಪನಿಗಳಿಗೆ ಹೊಡೆತ ನೀಡುವ ಈ ಮಸೂದೆಗೆ ಆಕ್ಷೇಪ ವ್ಯಕ್ತವಾದರೂ ನಿರ್ಲಕ್ಷಿಸಿರುವ ಅಮೆರಿಕವು ಈ ಶುಲ್ಕವನ್ನು ತೀವ್ರವಾಗಿ ಏರಿಸಿದೆ.

ಇದು 2014ರ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಶನ್ ಸರ್ವೀಸಸ್(USCIS) ಹೇಳಿದೆ. ಭಾರತೀಯ ಕಂಪನಿಗಳು ಇದರಿಂದಾಗಿ ವಾರ್ಷಿಕ 250ಮಿ.ಡಾಲರ್ ಹೆಚ್ಚು ತೆರಬೇಕಾಗಿದೆ. ಇದರಿಂದ 600 ಮಿಲಯನ್ ಡಾಲರ್ ಸಂಗ್ರಹಿಸಲು ಅಮೆರಿಕ ಉದ್ದೇಶಿಸಿದೆ.

ಭಾರತ, ಚೀನಾ ವಿರೋಧ: ಎಚ್ 1 ಬಿ ವೀಸಾ ಶುಲ್ಕ ಏರಿಕೆ ವಿರೋಧಿಸಿ ವರ್ಲ್ಡ್ ಟ್ರೆಡ್ ಆರ್ಗನೈಸೇಷನ್(WTO) ಗೆ ದೂರು ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಭಾರತದ ರಾಜ ತಾಂತ್ರಿಕ ಅಧಿಕಾರಿಗಳೊಡನೆ ಮಾತುಕತೆ ನಡೆಸುವುದಾಗಿ ಅಮೆರಿಕದ ಆಡಳಿತ ಮಂಡಳಿ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X