ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಗ್ಗರ್ಸ್ ಕಾಲೋನಿ ತಿಂಗಳಲ್ಲಿ ಸುಸ್ಥಿತಿಗೆ :ಸಿಎಂ

By Mahesh
|
Google Oneindia Kannada News

Yeddyurappa visits Beggars colony
ಬೆಂಗಳೂರು, ಆ.21: ದಿನದಿಂದ ದಿನಕ್ಕೆ ಹದಗೆಡುತ್ತಿರುವ ಬೆಗ್ಗರ್ಸ್ ಕಾಲೋನಿಯ ಪರಿಸ್ಥಿತಿಯನ್ನು ಅವಲೋಕಿಸಲು ಇಂದು ಸ್ವತಃ ಸಿಎಂ ಯಡಿಯೂರಪ್ಪ ಅವರು ಭೇಟಿ ನೀಡಿದರು. ಮುಖ್ಯಮಂತ್ರಿಗಳ ಜೊತೆಗೆ ಸಮಾಜ ಕಲ್ಯಾಣ ಇಲಾಖೆ ಹೊಣೆ ವಹಿಸಿಕೊಂಡಿರುವ ಸಚಿವ ಗೋವಿಂದ ಕಾರಜೋಳ ಅವರು ಕಾಣಿಸಿಕೊಂಡರು.

ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸಲಾಗುವುದು. 4 ವೈದ್ಯರು, 10 ದಾದಿಯರ ಅಗತ್ಯವಿದೆ. ಇಲ್ಲಿರುವ ವ್ಯಕ್ತಿಗಳನ್ನು ವಿಗಂಡಿಸಿ, ಒಳ್ಳೆ ಊಟ, ವಸತಿ ಒದಗಿಸಲಾಗುವುದು. ಶೌಚಾಲಯ ದುರಸ್ಥಿ, 24 ಗಂಟೆ ಕಾವೇರಿ ನೀರು ಪೂರೈಕೆ ಮಾಡಲಾಗುವುದು. ಸುಮಾರು 700 ಕ್ಕೂ ಜನ ಮಾನಸಿಕ ಅಸ್ವಸ್ಥರಿರುವುದು ಕಂಡು ಬಂದಿದೆ.

ತಿಂಗಳಿಗೊಮ್ಮೆ ಸಚಿವ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಅಭಿವೃದ್ದಿ ಕಾರ್ಯ ಪರಿಶೀಲನೆ ಮಾಡಲಾಗುವುದು. ಸಾರ್ವಜನಿಕರ ಸಲಹೆ, ಸೂಚನೆಗಳು ಸ್ವಾಗತಾರ್ಹ ಎಂದರು.

ನಿರಾಶ್ರಿತರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ಕೃಷ್ಣೇಗೌಡ ಅವರನ್ನು ಅಮಾನತು ಮಾಡಲಾಗಿದೆ. ಹಿಂದುಳಿದ ವರ್ಗಗಳ ಇಲಾಖೆ ಜಂಟಿ ನಿರ್ದೇಶಕ ರಾಮಯ್ಯ ಅವರನ್ನು ಪ್ರಭಾರ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಅಂಗಾಂಗ ಮಾರಾಟ ಎಲ್ಲ ಸುಳ್ಳು: ನಿರ್ಗತಿಕರ ಶವವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದ್ದು, ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವನ್ನು ಅಲ್ಲಗೆಳೆದ ಸಿಎಂ, ಸೆಲ್ವಕುಮಾರ್ ಅವರ ನೇತೃತ್ವದ ಸಮಿತಿ ಎಲ್ಲವನ್ನು ಪರಿಶೀಲಿಸಲಿದೆ ಎಂದರು.

ಸಿಎಂ, ಸಚಿವರು ಬರ್ತಾರೆ ಅಂದ್ರೆ ಮಾತ್ರಾ ಆಸ್ಪತ್ರೆ ಶುಚಿಗೊಳಿಸುತ್ತಾರೆ ಎಂಬುದು ಗೊತ್ತು. ಇದು ಇಲ್ಲಿನ ಪರಿಸ್ಥಿತಿಯಲ್ಲ, ಸರ್ಕಾರಿ ಆಸ್ಪತ್ರೆಯಲ್ಲೂ ಹೀಗೆ ಆಗುತ್ತೆ. ಮೂಗು ಮುಚ್ಚಿಕೊಂಡು ಓಡಾಡಲು ಕಷ್ಟವಾಗುತ್ತೆ. ಆದರೆ, ನಾನು ಭರವಸೆ ನೀಡುತ್ತಿದ್ದೇನೆ ಇನ್ನು ಒಂದು ತಿಂಗಳು ಬಿಟ್ಟು ಬಂದು ಇಲ್ಲಿನ ವ್ಯವಸ್ಥೆಯನ್ನ್ನು ನೋಡಿ ಆಮೇಲೆ ಮಾತಾಡಿ ಎಂದು ಮುಖ್ಯಮಂತ್ರಿಗಳು ಮಾಧ್ಯಮ ಮಿತ್ರರಿಗೆ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X