ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ಬಿನಲ್ಲಿ ಪೇಜಾವರ ಶ್ರೀ ಚಾತುರ್ಮಾಸ್ಯ

By Shami
|
Google Oneindia Kannada News

Sri Vishwesha Teertha swamiji now online
ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಉಪನ್ಯಾಸಗಳು, ಲೇಖನಗಳು, ಚಿತ್ರಗಳು ಮತ್ತು ಕಾರ್ಯಕ್ರಮಗಳ ವಿವರವನ್ನೊಳಗೊಂಡ ಅಂತರ್ಜಾಲ ತಾಣ www.vishveshavani.com ಇಂಟರ್ನೆಟ್ಟಿನಲ್ಲಿ ತೆರೆದುಕೊಂಡಿದೆ. ವಿಕೃತಿ ನಾಮ ಸಂವತ್ಸರದಲ್ಲಿ ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವ ಅವರು ಅಂತರ್ಜಾಲದ ಮೂಲಕವೂ ತಮ್ಮ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯ ಆರಂಭಿಸಿದ್ದಾರೆ.

ಯಾವುದೇ ಬಿಗುಮಾನವಿಲ್ಲದ ಸದಾ ಜನರ ಮಧ್ಯೆಯೇ ಇರಲಿಚ್ಛಿಸುವ ಶ್ರೀಗಳು, ಇದೀಗ ಅಂತರ್ಜಾಲದ ಭಕ್ತರಿಗೂ ಸುಲಭವಾಗಿ ಲಭ್ಯವಾಗಲಿದ್ದಾರೆ. ತಮ್ಮ ಚಾತುರ್ಮಾಸ್ಯದ ಉಪನ್ಯಾಸಗಳು, ಪ್ರವಚನಗಳ ಧ್ವನಿಮುದ್ರಣಗಳು ಪ್ರತಿದಿನ ತಾಣದಲ್ಲಿ ಪ್ರಕಟವಾಗುತ್ತಿದ್ದು ಮಹಾಭಾರತ, ಜಿಜ್ಞಾಸಾಧಿಕರಣ, ಆನಂದಮಯಾಧಿಕರಣ ಮುಂತಾದ ಪ್ರವಚನಗಳು ಈಗಾಗಲೇ ಲಭ್ಯವಿದೆ. ಪ್ರತಿದಿನದ ಕಾರ್ಯಕ್ರಮಗಳ ಚಿತ್ರಪಟಗಳು ಪ್ರಕಟಗೊಳ್ಳುತ್ತವೆ. ಆಸಕ್ತರು ಪೇಜಾವರರ ದರ್ಶನ ಭಾಗ್ಯ ಹಾಗೂ ವಿಚಾರಧಾರೆಗಳನ್ನು ಇಂಟರ್ನೆಟ್ ಮೂಲಕ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X