ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಪ್ರವಾಹಕ್ಕೆ ಭಾರತ ಕಾರಣ: ಜಿಹಾದಿ

By Mahesh
|
Google Oneindia Kannada News

‎Pakistan hardliners blame India, US for floods
ವಾಷಿಂಗ್ಟನ್, ಆ.20: ನೆರೆ ಸಂತ್ರಸ್ತರಿಗೆಂದು ಭಾರತವು ಕೊಡಮಾಡಿರುವ ನೆರವನ್ನು ಸ್ವೀಕರಿಸುವಂತೆ ಅಮೆರಿಕವು ಪಾಕಿಸ್ತಾನಕ್ಕೆ ಆಗ್ರಹಿಸಿದೆ. ಇದೇವೇಳೆ ಪಾಕಿಸ್ತಾನದ ಮೂಲಭೂತವಾದಿಗಳು ಮತ್ತು ಜಿಹಾದಿಗಳು ಪ್ರವಾಹಕ್ಕೆ ಭಾರತ, ಅಮೆರಿಕ ಮತ್ತು ಅಫ್ಘಾನಿಸ್ತಾನಗಳು ಕಾರಣ ಎಂದು ಅಪಪ್ರಚಾರ ಆರಂಭಿಸಿದ್ದಾರೆ.

ಭಾರತವು ನೆರೆ ಸಂತ್ರಸ್ತರಿಗೆಂದು ನೆರವು ನೀಡಲು ಮುಂದೆ ಬಂದಿದ್ದರೂ ಪಾಕಿಸ್ಥಾನವು ಅದನ್ನು ಸ್ವೀಕರಿಸಲು ಮೀನಮೇಷ ಎಣಿಸುತ್ತಿದೆ. ಅದಕ್ಕಿಂತಲೂ ವಿಪರ್ಯಾಸವೆಂದರೆ ಭೀಕರ ಪ್ರವಾಹಕ್ಕೆ ಭಾರತ, ಅಮೆರಿಕ ಮತ್ತು ಅಫಘಾನಿಸ್ತಾನಗಳೇ ಕಾರಣವೆಂದು ಮೂಲಭೂತವಾದಿಗಳು ಸಂತ್ರಸ್ತ ಪ್ರದೇಶಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.

ಭಾರತವು ಜಮ್ಮು ಕಾಶ್ಮೀರದ ಅಣೆಕಟ್ಟುಗಳಿಂದ ಉದ್ದೇಶಪೂರ್ವಕವಾಗಿ ನೀರು ಬಿಟ್ಟಿದ್ದು ಹಾಗೂ ಅಫ್ಘಾನಿಸ್ತಾನಕೂಡ ಇದೇ ರೀತಿ ಅಣೆಕಟ್ಟುಗಳಿಂದ ನೀರು ಬಿಡಲು ಪ್ರೇರೇಪಿಸಿದ್ದು ಭಾರೀ ಪ್ರವಾಹಕ್ಕೆಕಾರಣವೆಂದು ಮೂಲಭೂತವಾದಿಗಳು ತಮ್ಮ ಪರವಾಗಿರುವ ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಅಮೆರಿಕವು ಪಾಕಿಸ್ತಾನದ ಹವಾಮಾನ ಪರಿಸ್ಥಿತಿಯನ್ನೂ ಬದಲಿಸುತ್ತಿದೆ ಎಂದೂ ಇವರು ಪ್ರಚಾರ ಮಾಡುತ್ತಿದ್ದಾರೆ.

ಆದರೆ ಪಾಕಿಸ್ಥಾನವು ತನ್ನ ಕಷ್ಟಕಾಲಕ್ಕೊದಗಿ ಬಂದಿರುವ ಭಾರತದ ನೆರವನ್ನು ಸ್ವೀಕರಿಸಬೇಕು ಹಾಗೂ ಸಂತ್ರಸ್ತ ಜನರ ಸಂಕಷ್ಟ ನಿವಾರಿಸಬೇಕು ಎಂದು ಅಮೆರಿಕವು ಪಾಕಿಸ್ತಾನಕ್ಕೆ ಸಲಹೆ ನೀಡಿದೆ. ಇದರಂತೆ ಪಾಕ್ ಕೊನೆಗೂ ಭಾರತದ ನೆರವನ್ನು ಸ್ವೀಕರಿಸಲು ಒಪ್ಪಿಗೆ ಸೂಚಿಸಿದೆ.

ದಟ್ಸ್ ಕನ್ನಡ ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X