ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬ ಸಂಭ್ರಮಕ್ಕೆ ಉಗ್ರರ ಭೀತಿಯ ಕರಿ ನೆರಳು

By Mahesh
|
Google Oneindia Kannada News

Ahead of festive season, India on high alert
ನವದೆಹಲಿ, ಆ.20: ಮುಂಬರುವ ಸರಣಿ ಹಬ್ಬಗಳು ಹಾಗೂ ಕಾಮನ್ ವೆಲ್ತ್ ಕ್ರೀಡೆ ನಡೆಯುವ ಸಂದರ್ಭದಲ್ಲಿ ಪಾಕ್ ಮೂಲದ ಉಗ್ರರು ದಾಳಿ ನಡೆಸುವ ಭೀತಿ ಎದುರಾಗಿರುವಂತೆಯೇ ದೇಶದೆಲ್ಲೆಡೆ ಹೈ ಲರ್ಟ್ ಘೋಷಿಸಲಾಗಿದೆ.

ಕೇರಳ ಸೇರಿದಂತೆ ಕರ್ನಾಟಕದಲ್ಲೂ ಸಂಭಾವ್ಯ ದಾಳಿ ಸಾಧ್ಯತೆ ಕುರಿತು ಗೃಹ ಸಚಿವಾಲಯ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಲಷ್ಕರ್ ಇ ತೋಯ್ಬಾ ಸೇರಿದಂತೆ ಪಾಕಿಸ್ತಾನದಪ್ರಮುಖ ಭಯೋತ್ಪಾದನಾ ಸಂಘಟನೆಗಳು ಭಾರತದ ಮೇಲೆ ದೃಷ್ಟಿ ಹರಿಸಿವೆ.

ಗೃಹ ಸಚಿವಾಲಯದ ಎಚ್ಚರಿಕೆಯನ್ವಯ, ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ, ಮಾರುಕಟ್ಟೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪಾರ್ಕ್‌ಗಳು ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಬೇಕೆಂದು ಎಚ್ಚರಿಸಲಾಗಿದೆ.

ಸದ್ಯ ಆರಂಭವಾಗಿರುವ ರಂಜಾನ್ ಜತೆಗೆ ರಕ್ಷಾ ಬಂಧನ್, ಈದ್-ಉಲ್ ಫಿತರ್, ಓಣಂ ಹಾಗೂ ವರಮಹಾಲಕ್ಷ್ಮಿ ಹಬ್ಬದ ವೇಳೆ ಇರುವ ಜನರ ಸಂಭ್ರಮವನ್ನು ಹಿಂಸಾಚಾರದ ಮೂಲಕ ಬೆದರಿಸುವ ನಿಟ್ಟಿನಲ್ಲಿ ಭಯೋತ್ಪಾದನಾ ಶಕ್ತಿಗಳು ಸಂಚು ರೂಪಿಸಿವೆ. ಹೀಗಾಗಿ ಕೂಡಲೇ ಬಿಗಿ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೂ ಕಟ್ಟಪ್ಪಣೆ ವಿಧಿಸಿದೆ ಎಂದು ತಿಳಿದು ಬಂದಿದೆ.

ಮದನಿ ಬಂಧನ ಮತೀಯ ಗಲಭೆಗೆ ಆಹ್ವಾನ :
ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಅಬ್ದುಲ್ ನಾಸೀರ್ ಮದನಿಯನ್ನು ಕೇರಳದಲ್ಲಿ ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ಈಗಾಗಲೇ ಮದನಿ ಬಂಧನ ಹಿನ್ನೆಲೆಯಲ್ಲೂ ಮತೀಯವಾದಿಗಳಿಂದ ದಾಳಿ ನಡೆಯುವ ಭೀತಿ ಎದುರಾಗಿರುವಾಗಲೇ ಕೂಡಲೇ ಹೆಚ್ಚುವರಿ ಪಡೆಯನ್ನು ಸೂಕ್ಷ್ಮ ಪ್ರದೇಶಗಳಿಗೆ ನಿಯೋಜಿಸುವಂತೆ ಕೇಂದ್ರ ಗೃಹ ಸಚಿವಾಲಯ ಕರ್ನಾಟಕ ದಿಲ್ಲಿ ಹಾಗೂ ಕೇರಳ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.

ಆ.20ರಂದು ವರಮಹಾಲಕ್ಷ್ಮಿ ಹಬ್ಬವಿದ್ದರೆ, ಆ.23ಕ್ಕೆ ದೇಶಾದ್ಯಂತ ಓಣಮ್ ಹಬ್ಬವಿದೆ. ಆ.24ರಂದು ರಕ್ಷಾಬಂಧನ್ ಹಾಗೂ ಸೆ.13ರಂದು ಇದ್ ಉಲ್ ಫಿತರ್ ಹಬ್ಬವಿರುವುದರಿಂದ ಈ ಸಂದರ್ಭದಲ್ಲಿ ಹಿಂಸಾಚಾರ ನಡೆಸಲು ಉಗ್ರರು ಸಂಚು ಹೂಡಿದ್ದಾರೆಂದು ಆತಂಕ ವ್ಯಕ್ತಪಡಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X