ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ವಿರುದ್ಧ ಸೆಡ್ಡು ಹೊಡೆದ ವಕೀಲನಿಗೆ ಛೀಮಾರಿ

By Mrutyunjaya Kalmat
|
Google Oneindia Kannada News

Azim Premji
ಬೆಂಗಳೂರು, ಆ. 19 : ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜೀ ವಿರುದ್ಧ ಭೂಕಬಳಿಕೆ ಸುಳ್ಳು ಆರೋಪ ಹೊರಿಸಿ ಅರ್ಜಿ ಸಲ್ಲಿಸಿದ್ದ ವಕೀಲನಿಗೆ ಹೈಕೋರ್ಟ್ ಒಂದು ಲಕ್ಷ ರುಪಾಯಿ ದಂಡ ವಿಧಿಸಿದೆ.

ಕೆ ಆರ್ ಪುರ ಹೋಬಳಿಯಲ್ಲಿನ ಬೆಳ್ಳಂದೂರು ಸಮೀಪದ ಕೆಂಪಾಪುರ ಕೆರೆ ದಂಡೆಯ 23 ಗುಂಟೆ ಸರಕಾರಿ ಜಾಗವನ್ನು ಇವರು ಕಬಳಿಕೆ ಮಾಡಿಕೊಂಡಿರುವುದಾಗಿ ವಕೀಲ ಬಿ ಸಂತೋಷ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸರಕಾರಿ ಜಮೀನನನ್ನು ಅಜೀಂ ಪ್ರೇಮ್ ಜೀ ಅವರು ಕಬಳಿಕೆ ಮಾಡಿಕೊಂಡಿದ್ದಾರೆ ಎಂದು 2007ರಲ್ಲಿ ಇಂಗ್ಲಿಷ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಆಧಾರವಾಗಿಟ್ಟುಕೊಂಡು ಅರ್ಜಿ ಸಲ್ಲಿಸಲಾಗಿತ್ತು.

2007ರಲ್ಲಿ ಕೆಲವೊಂದು ಉದ್ದೇಶಕ್ಕಾಗಿ 15 ಎಕರೆ ಭೂಮಿಯನ್ನು ಅಜೀಂ ಪ್ರೇಮ್ ಜೀ ಅವರು ಸ್ವಾಧೀನಪಡಿಸಿಕೊಂಡಿದ್ದರು. ಅದರಲ್ಲಿ 23 ಗುಂಟೆ ಜಮೀನು ಹೆಚ್ಚುವರಿಯಾಗಿ ಬಂದಿದ್ದರಿಂದ ಅದೇ ಸಾಲಿನಲ್ಲಿ ಹೆಚ್ಚುವರಿ ಜಮೀನನ್ನು ಸರಕಾರಕ್ಕೆ ವಾಪಸ್ ಮಾಡಿದ್ದರು. ಜಮೀನು ವಾಪಸು ಮಾಡಿದ್ದನ್ನು ಗಮನಿಸಿದೇ, ಆ ಬಗ್ಗೆ ದಾಖಲೆಗಳನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸಿದ್ದು ನ್ಯಾಯಮೂರ್ತಿಗಳ ಕೋಪಕ್ಕೆ ಕಾರಣವಾಗಿದೆ. ಅರ್ಜಿದಾರ ವರ್ತನೆ ಖಂಡಿಸಿದ ನ್ಯಾಯಾಲಯ 1 ಲಕ್ಷ ರುಪಾಯಿ ದಂಡವನ್ನು ವಿಧಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X