ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚಕ ರಾಮಲಿಂಗರಾಜುಗೆ ಜಾಮೀನು

By Mahesh
|
Google Oneindia Kannada News

Satyam scam: Andhra HC grants bail to Ramalinga Raju
ಹೈದರಾಬಾದ್, ಆ.18: ಸತ್ಯಂ ಕಂಪ್ಯೂಟರ್ಸ್ ನ ಬಹುಕೋಟಿ ವಂಚನೆ ಹಗರಣದ ರುವಾರಿ ಮಾಜಿ ಸಿಇಒ ಬಿ ರಾಮಲಿಂಗರಾಜು(54) ಅವರಿಗೆ ಆಂಧ್ರ ಪ್ರದೇಶ ಹೈ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯದ ಕಾರಣದಿಂದ ರಾಜು ಕಳೆದ ಸೆಪ್ಟೆಂಬರ್ ನಿಂದ ಕೋರ್ಟ್ ವಿಚಾರಣೆಯಲ್ಲಿ ಪಾಲ್ಗೊಂಡಿರಲಿಲ್ಲ.

ರಾಜು ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ್ದ ಸಿಬಿಐ ಪರ ವಕೀಲ ರಾವಲ್ ಅವರು, ರಾಜು ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಬೇಕು. ಹೈಕೋರ್ಟ್ ನಲ್ಲಿ ಜಾಮೀನು ನೀಡುವುದು ಸರಿಯಲ್ಲ ಎಂದಿದ್ದರು. ಅಲ್ಲದೆ ,ಈ ಪ್ರಕರಣದಲ್ಲಿ 250 ಕ್ಕೂ ಹೆಚ್ಚು ಜನ ಸಾಕ್ಷಿಗಳಿದ್ದು, ಜಾಮೀನು ಪಡೆದ ನಂತರ ರಾಜು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವ ಸಾಧ್ಯತೆಯಿದೆ ಎಂದು ರಾವಲ್ ಹೇಳಿದ್ದಾರೆ.

ವಿಡಿಯೋ:
ಮಾಜಿ ಸಿಇಒ ರಾಮಲಿಂಗರಾಜುಗೆ ಜಾಮೀನು[PLay]

ಜುಲೈ 20 ರಲ್ಲಿ ರಾಮಲಿಂಗ ರಾಜು ಅವರ ಸೋದರ ಬಿ ರಾಮರಾಜು , ಮಾಜಿ ಸಿಎಫ್ ಒ ವಿ ಶ್ರೀನಿವಾಸ್ ಸೇರಿದಂತೆ ಐವರಿಗೆ ಆಂಧ್ರ ಪ್ರದೇಶ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಒಟ್ಟಾರೆ ಈ ಪ್ರಕರಣದಲ್ಲಿ ಆರೋಪ ಹೊತ್ತಿದ್ದ 9ಜನರಲ್ಲಿ ರಾಮಲಿಂಗ ರಾಜು ಒಬ್ಬರನ್ನು ಬಿಟ್ಟು ಉಳಿದವರು ಜಾಮೀನು ಪಡೆದಿದ್ದರು.

ರಾಮಲಿಂಗರಾಜು ಅವರ ಮೇಲೆ ಭಾರತೀಯ ದಂಡ ಸಂಹಿತೆ 120ಬಿ, 409, 420, 471 ಸೆಕ್ಷನ್ ಅನ್ವಯ ಆರೋಪ ಹೊರೆಸಲಾಗಿದೆ. ಜನವರಿ 2009 ರಲ್ಲಿ ಬೆಳಕಿಗೆ ಬಂದ ಸುಮಾರು 7,800 ಕೋಟಿ ರುಗಳ ಆರ್ಥಿಕ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸತ್ಯಂ ಕಂಪ್ಯೂಟರ್ಸ್ ನ ಸಿಇಒ ಆಗಿದ್ದ ರಾಮಲಿಂಗರಾಜು ಹಾಗೂ ಅವರ ತಮ್ಮ ರಾಮ ರಾಜು ಅವರನ್ನು ಜನವರಿ 9 ರಂದು ಬಂಧಿಸಿ, ಹತ್ತು ವರ್ಷದ ಕಾರಾಗೃಹವಾಸಕ್ಕೆ ಕಳುಹಿಸಲಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X