ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಪ್ ಕಾಮ್ಸ್ ಮಳಿಗೆಯಲ್ಲಿ ವಿಶೇಷ ಮಾರಾಟ

By Mrutyunjaya Kalmat
|
Google Oneindia Kannada News

Goddess Lakshmi
ಬೆಂಗಳೂರು, ಆ. 18 : ಕರ್ನಾಟಕದಲ್ಲಿ ಇದೀಗ ಶ್ರಾವಣ ಸಂಭ್ರಮ ಆರಂಭವಾಗಿದೆ. ಹಬ್ಬದ ಸಾಲು ಬಂತೆಂದರೆ ಅದರ ಬಿಸಿ ಮೊದಲು ತಟ್ಟುವುದು ತರಕಾರಿ, ಹಣ್ಣು, ಹೂವು, ಹಾಲು, ಮೊಸರು, ತುಪ್ಪ ಮತ್ತಿತರ ಅಡುಗೆ ಹಾಗೂ ಪೂಜಾ ಸಾಮಗ್ರಿಗಳಿಗೆ. ಈ ಪದಾರ್ಥಗಳಿಗೆ ಸಹಜವಾಗಿಯೇ ಅಪಾರವಾದ ಬೇಡಿಕೆ. ಮಧ್ಯವರ್ತಿಗಳ ಸಮಯ ಸಾಧಕತನದಿಂದಾಗಿ ಮಾರುಕಟ್ಟೆಯಲ್ಲಿ ಈ ಎಲ್ಲ ಪದಾರ್ಥಗಳ ಬೆಲೆ ಏಕಾಏಕಿ ಗಗನಕ್ಕೆ ಚಿಮ್ಮುವುದು ಅಷ್ಟೇ ಸಹಜ.

ದುಬಾರಿ ಪದಾರ್ಥಗಳನ್ನು ಕೊಂಡು ತಂದು ಹಬ್ಬ ಮಾಡುವ ಬಡವರ ಪಾಡು ಹೇಳತೀರದು. ಎಷ್ಟೇ ಬಡತನವಿದ್ದರೂ ಲಕ್ಷ್ಮಿ ಫೋಟೋಗೆ ಬೊಟ್ಟು ಕುಂಕುಮ ಒಂದು ಸೇವಂತಿಗೆ ಹೂವು ಮುಡಿಸಿ ನಮಿಸುವ ಹೆಣ್ಣು ಮಕ್ಕಳಿಂದಾಗಿ ನಮ್ಮ ನಾಡಿನಲ್ಲಿ ಇನ್ನೂ ಮಳೆ ಬೀಳುತ್ತಿದ್ದು, ಬೆಳೆ ಅರಳುತ್ತಿದ್ದು, ಆಗಾಗ ವಿದ್ಯುತ್ ದೀಪಗಳು ಹತ್ತಿಕೊಳ್ಳುತ್ತಿವೆ ಎಂದರೆ ತಪ್ಪಾಗುವುದಿಲ್ಲ. ಇಂಥವರ ಹಬ್ಬದ ಸಂಭ್ರಮಗಳನ್ನು ನಾವು ಯಾವ ಬಗೆಯಲ್ಲಿ, ಯಾವ ರೂಪದಲ್ಲಿ ಹೆಚ್ಚಿಸುವುದಕ್ಕೆ ಸಾಧ್ಯ?

ಜನತೆಗಾಗಿ ಉತ್ಪಾದನೆ ಮತ್ತು ವ್ಯಾಪಾರ ನಡೆಸುವ ಎರಡು ಸರಕಾರಿ ಸಂಸ್ಥೆಗಳು(ಹಾಪ್ ಕಾಮ್ಸ್ ಮತ್ತು ಕೆಎಂಎಫ) ಹಬ್ಬಕ್ಕೋಸ್ಕರ ಜನಪರ ನಿಲವು ತಾಳಿವೆ. ನ್ಯಾಯ ಬೆಲೆಗಳಲ್ಲಿ ಪದಾರ್ಥಗಳನ್ನು ಮಾರಾಟಕ್ಕಿಡುವ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ. ಈ ವ್ಯವಸ್ಥೆ ಇದೇ ಬುಧವಾರ ಆಗಸ್ಟ್ 18 ರಿಂದ ಜಾರಿಗೆ ಬಂದಿದ್ದು ತಾವುಗಳು ಬುಟ್ಟಿ ತೆಗೆದುಕೊಂಡು ಹಾಪ್ ಕಾಮ್ಸ್ ಮಳಿಗೆಗಳತ್ತ ಹೋಗಬಹುದಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿರುವ ಮಳಿಗೆಗಳ ವಿಳಾಸ ಕೆಳಕಂಡಂತಿದೆ. ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ಆಗಸ್ಟ್ 20. ಅಂದು ಸರಕಾರಿ ಕಚೇರಿಗಳಿಗೆ RH ಅಂದರೆ Restricted Holiday ಸೌಲಭ್ಯ ಇರುತ್ತದೆ. ಬಹುತೇಕ ಮಹಿಳೆಯರು ಈ ರಜಾ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಾರೆ.

ಹಾಪ್ ಕಾಮ್ಸ್ ವಿಶೇಷ ಮಾರಾಟ ಮೇಳ ನಡೆಯುವ ಸ್ಥಳಗಳು

ಹಾಪ್ ಕಾಮ್ಸ್ ಪ್ರಧಾನ ಕಚೇರಿ, ಲಾಲ್ ಬಾಗ್ ಮತ್ತು ಹಡ್ಸನ್ ಸರ್ಕಲ್, ಕಬ್ಬನ್ ಪಾರ್ಕ್ ನಲ್ಲಿ ಹಣ್ಣು ತರಕಾರಿ ಜೊತೆ ಹೂವು, ಪೂಜಾ ಸಾಮಗ್ರಿಗಳ ಮಾರಾಟ ಮಾಡಲಾಗುವುದು. ಮಲ್ಲೇಶ್ವರಂ ಆಟದ ಮೈದಾನ, ಜೆಪಿ ಪಾರ್ಕ್, ಮತ್ತೀಕೆರೆ, ಲಾಲ್ ಬಾಗ್ ಪಶ್ಚಿಮ ದ್ವಾರ, ಬ್ರಿಗೇಡ್ ಮಿಲೇನಿಯರ್, ಅರಕೆರೆ, ನಂಜಪ್ಪ ವೃತ್ತ, ವಿದ್ಯಾರಣ್ಯಪುರ, ಸುಬ್ರಮಣ್ಯನಗರ, ರಾಗಿಗುಡ್ಡ ಆಂಜನೇಯಸ್ವಾಮಿ ದೇವಸ್ಥಾನ, ಜಯನಗರ, ರಾಮಮೂರ್ತಿನಗರ, ಮಹದೇವಪುರ, ಬಿಬಿಎಂಪಿ ಕಚೇರಿ ಸಮೀಪ, ಬಿಡಿಎ ಕಾಂಪ್ಲೆಕ್ಸ್, ಎಚ್ಎಸ್ಆರ್ ಲೇಔಟ್, ಬಿಡಿಎ ಕಾಂಪ್ಲೆಕ್ಸ್ ಇಂದಿರಾನಗರ, ಬಿಡಿಎ ಕಾಂಪ್ಲೆಕ್ಸ್ ಕೋರಮಂಗಲ.

ಶ್ರೀ ವರಮಹಾಲಕ್ಷ್ಮಿ ಪೂಜಾ ವಿಧಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X