ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಅತ್ಯಂತ ಶ್ರೀಮಂತ ಪಕ್ಷ ಕಾಂಗ್ರೆಸ್

By Mahesh
|
Google Oneindia Kannada News

Congress richest party, BSP fastest to grow rich
ನವದೆಹಲಿ, ಆ.18: ದೇಶದ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ , ಕಾಂಗ್ರೆಸ್ ಪಕ್ಷ ಅತ್ಯಂತ ಶ್ರೀಮಂತವಾಗಿದೆ. 2002-2003 ಹಾಗೂ 2009-2010 ವರ್ಷಗಳ ಅವಧಿಯ ಲೆಕ್ಕಾಚಾರದಂತೆ ಸುಮಾರು 1,518 ಕೋಟಿ ರುಗಳನ್ನು ಸಂಗ್ರಹಿಸಿ ಅಗ್ರಸ್ಥಾನಕ್ಕೇರಿದೆ.

ಇದೇ ಅವಧಿಯಲ್ಲಿ ಭಾರತೀಯ ಜನತಾ ಪಕ್ಷ 754 ಕೋಟಿ ರು ಹಾಗೂ ಬಹುಜನ ಸಮಾಜವಾದಿ ಪಕ್ಷ 358 ಕೋಟಿ ರು ಗಳಿಸಿದೆ.

ಆದರೆ, ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಕಂಡ ಪಕ್ಷವಾಗಿ ಬಿಎಸ್ ಪಿ ಹೊರಹೊಮ್ಮಿದ್ದು, 2002-2003 ರ ಅವಧಿಯಲ್ಲಿ 6 ಕೋಟಿ ರು ಇದ್ದ ಪಕ್ಷದ ನಿಧಿ, 2009-2010 ರಲ್ಲಿ 182 ಕೋಟಿ ರು ಗಳಿಗೇರಿದೆ. 2002-2003ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ 69.56 ಕೋಟಿ ರು ಗಳಿಸಿತ್ತು, 2009-2010 ರಲ್ಲಿ 497 ಕೋಟಿ ಸಂಗ್ರಹಿಸಿದೆ.

ಸಮಾಜವಾದಿ ಪಕ್ಷದ ಆಸ್ತಿ ಮೊತ್ತ 2002-2003ರ ಅವಧಿಯಲ್ಲಿ 14 ಕೋಟಿಯಾಗಿದ್ದು, ಮುಂದಿನ ಏಳು ವರ್ಷಗಳಲ್ಲಿ 178 ಕೋಟಿಗೆ ಏರಿದೆ.

ಮಾಹಿತಿ ಹಕ್ಕು ಕಾಯ್ದೆ ಮೂಲಕ ನ್ಯಾಷನಲ್ ಎಲೆಕ್ಷನ್ ವಾಚ್ (NEW) ಈ ಮಾಹಿತಿಯನ್ನು ಕಲೆ ಹಾಕಿದೆ. ಕಾಂಗ್ರೆಸ್ , ಬಿಜೆಪಿ, ಬಿಎಸ್ ಪಿ, ಎಡಪಕ್ಷಗಳಾದ ಸಿಪಿಐ, ಸಿಪಿಐ ಎಂ, ಎನ್ ಸಿಪಿ, ಎಸ್ ಪಿ ಹಾಗೂ ರಾಷ್ಟ್ರೀಯ ಜನತಾ ದಳದ ಕಚೇರಿಗಳ ತೆರಿಗೆ ಪಾವತಿ ಮಾಹಿತಿ ಆಧಾರವಾಗಿ ಪರಿಗಣಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X