ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಿನಾಥ್ ರೆಸಾರ್ಟ್ ಮೇಲೆ ಕಾಫಿ ಡೇ ಕಣ್ಣು

By Mahesh
|
Google Oneindia Kannada News

Captain Gopinath
ಬೆಂಗಳೂರು, ಆ.18: ಜಾಗತಿಕ ಹೂಡಿಕೆದಾರರಿಂದ 1200 ಕೋಟಿ ರೂಪಾಯಿಗಳಷ್ಟು ಹಣ ಕ್ರೋಢೀಕರಿಸಿರುವ ಕಾಫಿ ಡೇ ಹೋಲ್ಡಿಂಗ್ಸ್, ಅಗ್ಗದ ವಿಮಾನ ಯಾನ ಸಂಸ್ಥೆಯ ಸ್ಥಾಪಕ ಡೆಕ್ಕನ್ ಏವಿಯೇಷನ್ ನ ಕ್ಯಾಪ್ಟನ್ ಜಿಆರ್ ಗೋಫಿನಾಥ್ ಮಾಲೀಕತ್ವದ ಅಂಡಮಾನ್ ನಲ್ಲಿರುವ ಐಷಾರಾಮಿ ರೆಸಾರ್ಟ್ ಖರೀದಿಗೆ ಮುಂದಾಗಿದೆ.

ಈ ಐಷಾರಾಮಿ ರೆಸಾರ್ಟ್ಸ್ ಬೇರ್ ಫುಟ್ ನಲ್ಲಿ ಕ್ಯಾ.ಗೋಪಿನಾಥ್ ಶೇ.35 ಪಾಲು ಹೊಂದಿದ್ದು, 7 ಎಕರೆ ಪ್ರದೇಶದ ವಿಸ್ತಾರ ಹಾಗೂ 18 ವಿಲ್ಲಾಗಳನ್ನು ಹೊಂದಿದೆ. ಈ ರೆಸಾರ್ಟಿನಲ್ಲಿ ಲಂಡನ್ ಮೂಲದ ಭಾರತೀಯ ಹೂಡಿಕೆದಾರರು ಶೇ.38 ಪಾಲು ಹೊಂದಿದ್ದು ಉಳಿದದ್ದನ್ನು ಸ್ಥಳೀಯ ಹೂಡಿಕೆದಾರರು ಹೊಂದಿದ್ದಾರೆ. ಈ ರೆಸಾರ್ಟಿಗೆ ಸೇರಿದ 60 ಎಕರೆಗಳಷ್ಟು ಹೆಚ್ಚುವರಿ ಭೂಮಿಯೂ ಇದೆ.

ಕಾಫಿ ಡೇ ಹೋಲ್ಡಿಂಗ್ಸ್ ಚಿಕ್ಕಮಗಳೂರು, ಕಬಿನಿ, ಬಂಡಿಪುರದಲ್ಲಿ ರೆಸಾರ್ಟ್ ನಡೆಸುತ್ತಿದೆ. ಸಿಕಾಡಾ ರೆಸಾರ್ಟ್ ಅಲ್ಲದೆ ವಿಪ್ರೋ ಅಜಿಂ ಪ್ರೇಜಿಂ ಒಡೆತನ ರೆಸಾರ್ಟ್ ಕೂಡಾ ಖರೀದಿಸಿದೆ. ಇನ್ನೂ ಹತ್ತು ಪ್ರದೇಶಗಳಲ್ಲಿ ರೆಸಾರ್ಟ್ ಸ್ಥಾಪನೆಗೆ ಮುಂದಾಗಿದೆ.

ಮುಂಬರುವ ಮುರ್ನಾಲ್ಕು ವರ್ಷಗಳಲ್ಲಿ ಸುಮಾರು 1,700 ಕೋಟಿ ಬಂಡವಾಳ ಹೂಡಿ ತನ್ನ ವಹಿವಾಟನ್ನು ವಿಸ್ತರಿಸಲು ಕಾಫಿ ಡೇ ಚಿಂತನೆ ನಡೆಸಿದೆ. ಇದರಲ್ಲಿ 200 ಕೋಟಿ ಪ್ಲಾಂಟೇಷನ್ ಗೆ, 700 ಕೋಟಿ ರೀಟೈಲ್ ಮಳಿಗೆಗಳ ವಿಸ್ತರಣೆಗೆ ಹಾಗೂ ಮೂಲ ಸೌಕರ್ಯ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗಾಗಿ 750 ಕೋಟಿ ಖರ್ಚುಮಾಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X