ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗಡಿಯಲ್ಲಿ ಚೀನಾದ ಕ್ಷಿಪಣಿಗಳು

By Mahesh
|
Google Oneindia Kannada News

China deploys new missiles on India border
ವಾಷಿಂಗ್ಟನ್, ಆ.18: ಭಾರತದ ಸಿಯೋ ಗಡಿ ಪ್ರದೇಶದಲ್ಲಿ ದೂರಗಾಮಿ ಸಾಮರ್ಥ್ಯದ ಸಿಎನ್ ಎನ್ 5 ಕ್ಷಿಪಣಿಗಳನ್ನು ಚೀನಾ ನಿಯೋಜಿಸಿದೆ ಎಂದು ಪೆಂಟಗನ್ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ

ಆರ್ಥಿಕ ಹಾಗೂ ರಾಜಕೀಯ ಸಂಬಂಧ ವೃದ್ಧಿಗಾಗಿ ಭಾರತ ಸತತ ಪ್ರಯತ್ನಿಸುತ್ತಲೇ ಇದೆ. ಆದರೆ, ಭಾರತದ ಗಡಿ ಭಾಗದ ಭೂ ಪ್ರದೇಶದ ಮೇಲೆ ಕಣ್ಣಿರಿಸಿರುವ ಚೀನಾ, ಶಸ್ತ್ರ ಸಜ್ಜಿತ ಸೈನಿಕರನ್ನು ಆಗಾಗ್ಗೆ ಗಸ್ತು ತಿರುಗಲು ಬಿಟ್ಟು, ಯುದ್ಧದ ಭೀತಿ ಸೃಷ್ಟಿಸುತ್ತಿದೆ. ಗಡಿಭಾಗದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯ ಹೆಸರಿನಲ್ಲಿ ಬೃಹತ್ ರಸ್ತೆ ಹಾಗೂ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ಚೀನಾ ಮುಂದಾಗಿದೆ.

ಭಾರತ ಹಾಗೂ ಚೀನಾ ಒಟ್ಟು 4,057 ಕಿ.ಮೀ ಗಡಿ ಭಾಗವನ್ನು ಹಂಚಿಕೊಂಡಿದೆ. ಟಿಬೆಟ್ ನಂತೆ ಭಾರತದ ಅರುಣಾಚಲ ಪ್ರದೇಶ ಕೂಡಾ ಟಿಬೆಟ್ ಪ್ರಸ್ಥಭೂಮಿಗೆ ಸೇರಿದ ಭಾಗ ಎಂದು ಚೀನಾ ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಭಾರತದ ಗಡಿ ನೀತಿ ಉನ್ನತವಾಗಿದ್ದು, ಶಾಂತಿ ಕಾಯ್ದುಕೊಳ್ಳುವಲ್ಲಿ ಸಫಲತೆ ಕಂಡಿದೆ ಎಂದು ಪೆಂಟಗನ್ ತನ್ನ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X