ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜ್ಪೆ ದುರಂತ, ಸಂತ್ರಸ್ತರಿಗೆ ಸಿಗಲಿದೆ ವಿಮೆ ಹಣ

By Mahesh
|
Google Oneindia Kannada News

Mangalore Plane Crash: Insurers make full payment
ಮಂಗಳೂರು/ನವದೆಹಲಿ, ಆ.19: ವಿಮಾ ಕಂಪೆನಿಗಳಾದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜನರಲ್ ಇನ್ಸುರೆನ್ಸ್, ಹಾಗೂ ಇತರ ಕಂಪೆನಿಗಳು ಮಂಗಳೂರಿನಲ್ಲಿ ಕಳೆದ ಮೇ ತಿಂಗಳಿನಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ ವಿಮಾ ಹಣವನ್ನು (ಸುಮಾರು 90 ಕೋಟಿ ರು)ಪೂರ್ತಿಯಾಗಿ ಪಾವತಿಸಿವೆ.

ಈ ಕಂಪೆನಿಗಳು ಮೊದಲು ಶೇ.60 ರಷ್ಟು ವಿಮಾ ಹಣವನ್ನು ಪಾವತಿಸಿದ್ದವು. ಈ ದುರಂತದಿಂದ ವಿಮಾನಕ್ಕೆ 230 ಕೋಟಿ ರೂಪಾಯಿಗಳ ನಷ್ಟ ಆಗಿದೆ ಎಂದು ಅಂದಾಜಿಸಲಾಗಿತ್ತು. ಪ್ರಮುಖ ಕಂಪೆನಿಗಳಾದ ರಿಲಯನ್ಸ್ ಜನರಲ್ ಇನ್ಸುರೆನ್ಸ್, ಬಜಾಜ್ ಅಲಿಯಾನ್ಸ್, ಇಫ್ಕೋ ಟೊಕಿಯೊ ಹಾಗೂ ಹೆಚ್ ಡಿಎಫ್ ಸಿ ಇರ್ಗೊ ಕಂಪೆನಿಗಳಲ್ಲಿ ವಿಮೆ ಮಾಡಿಸಲಾಗಿತ್ತು.

ಈ ವಿಮಾ ಮೊತ್ತವನ್ನು ದಾಖಲೆಯ ಮೂರು ತಿಂಗಳಿನಲ್ಲೇ ಪಾವತಿಸಲಾಗಿದೆ. ಪ್ರಯಾಣಿಕರಿಗೆ ನೀಡಬೇಕಾದ ವಿಮಾ ಹಣವನ್ನು ಏರ್ ಇಂಡಿಯಾ ನೇಮಿಸಿದ ಕಾನೂನು ಸಂಸ್ಥೆ ತನ್ನ ವರದಿಯನ್ನು ನೀಡಿದ ಕೂಡಲೇ ಪಾವತಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ದುರಂತ ಸಂಭವಿಸಿದ ಮಾರನೇ ದಿನವೇ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಏರ್ ಇಂಡಿಯಾ ಅಧ್ಯಕ್ಷ ಅರವಿಂದ್ ಜಾಧವ್ ಅವರು 12 ವರ್ಷ ಮೇಲ್ಪಟ್ಟ ಮೃತ ಪ್ರಯಾಣಿಕರೆಲ್ಲರಿಗೂ ಮಧ್ಯಂತರ ಪರಿಹಾರವಾಗಿ ತಲಾ 10ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಪ್ರಕಟಿಸಿದ್ದರು. ಸಂತ್ರಸ್ತರಿಗೆ ವಿಮಾ ಹಣವನ್ನು ಅಂತಿಮವಾಗಿ ಕಾನೂನು ಸಂಸ್ಥೆ ನಿಗದಿಪಡಿಸಿದ ನಂತರ ನೀಡಲಾಗುವುದು ಎಂದು ಜಾಧವ್ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X