ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ಕಾಯ್ದೆಗೆ ಅಂಕಿತ ಬೇಡ ಕಾಂಗ್ರೆಸ್ ಮನವಿ

By Mahesh
|
Google Oneindia Kannada News

Pratibha Patil
ಬೆಂಗಳೂರು, ಆ. 17: ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತರಲು ಯತ್ನಿಸುತ್ತಿರುವ ಗೋಹತ್ಯಾ ನಿಷೇಧ ಕಾಯ್ದೆಗೆ ಅಂಕಿತ ಹಾಕದಂತೆ ರಾಷ್ಟ್ರಪತಿ ಪ್ರತಿಭಾದೇವಿಸಿಂಗ್ ಪಾಟೀಲ್ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಂಸದೆ ತೇಜಸ್ವಿನಿ, ಶಾಸಕ ರಮಾನಾಥ ರೈ, ಬಿ.ಸಿ. ಪಾಟೀಲ್ , ರೋಷನ್ ಬೇಗ್, ಅಭಯಚಂದ್ರ ಜೈನ್ ಸೇರಿದಂತೆ ಸಂಸದರು, ಶಾಸಕರು, ಮುಖಂಡರಿದ್ದ 50 ಮಂದಿಯ ಕಾಂಗ್ರೆಸ್ ನಿಯೋಗ ಸೋಮವಾರ ಪ್ರತಿಭಾ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.

ಬಿಜೆಪಿ ಸರ್ಕಾರ ಕೋಮು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಮಸೂದೆಗೆ ಅಂಕಿತ ದೊರೆತಲ್ಲಿ ಕೋಮು ಸಂಘರ್ಷಗಳು ಸಂಭವಿಸುವ ಸಾಧ್ಯತೆಗಳಿವೆ. ಬಡವರ, ಹಿಂದುಳಿದವರ ಆಹಾರ ಪದ್ಧತಿಯ ಮೇಲೆ ಸರ್ಕಾರ ಸವಾರಿ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ನಾಯಕರು ಮುಂಬರಬಹುದಾದ ದುಷ್ಪರಿಣಾಮಗಳ ಕುರಿತು ರಾಷ್ಟ್ರಪತಿಯವರ ಮನವರಿಕೆ ಮಾಡಿದ್ದಾರೆ.

ರಾಜ್ಯ ವಿಧಾನಸಭೆ ಮತ್ತು ಪರಿಷತ್‌ಗಳಲ್ಲಿ ಅಂಗೀಕಾರ ಪಡೆದುಕೊಂಡಿದ್ದ ಗೋಹತ್ಯಾ ನಿಷೇಧ ಕಾಯ್ದೆಯನ್ನು ಸರ್ಕಾರವು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಕಳುಹಿಸಿತ್ತು. ಆದರೆ ಇದಕ್ಕೆ ಸಹಿ ಹಾಕುವ ಬದಲು, ರಾಷ್ಟ್ರಪತಿಯವರ ನಿರ್ಧಾರಕ್ಕೆಂದು ರಾಜ್ಯಪಾಲರು ಕಡತವನ್ನು ದಿಲ್ಲಿಗೆ ವರ್ಗಾಯಿಸಿದ್ದರು. ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ನಿರ್ಧಾರ ಕುತೂಹಲ ಕೆರಳಿಸಿದೆ.

ಗ್ಯಾಲರಿ:
ರಾಷ್ಟ್ರಪತಿ ಭವನದಲ್ಲಿ ಕಾಂಗೈ ನಾಯಕರ ಗ್ರೂಪ್ ಫೋಟೋ | ಬಿಜೆಪಿ ಜನಜಾಗೃತಿ ಸಮಾವೇಶ ಚಿತ್ರಗಳು |

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X