ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಪೊಲೀಸರ ವಶಕ್ಕೆ ಅಬ್ದುಲ್ ಮದನಿ

By Prasad
|
Google Oneindia Kannada News

Abdul Nasser Madani
ಕೊಲ್ಲಂ, ಆ. 17 : ಬೆಂಗಳೂರು ಸರಣಿ ಸ್ಫೋಟದ ಆರೋಪಿ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು ಕರ್ನಾಟಕದ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಏಳು ದಿನಗಳಿಂದ ಮದನಿಯನ್ನು ವಶಪಡಿಸಿಕೊಳ್ಳಲು ಕರ್ನಾಟಕದ ಪೊಲೀಸರು ಕೇರಳದಲ್ಲಿ ಬೀಡುಬಿಟ್ಟಿದ್ದರು. ಕರ್ನಾಟಕ ಉಚ್ಚ ನ್ಯಾಯಾಲಯ ಆತನ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತ್ತು. ಇಂದು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ವಿಚಾರಣೆಗೆ ಬರಲಿತ್ತು. ಅದಕ್ಕೂ ಮೊದಲೇ ಆತನನ್ನು ಭಾರೀ ಬಿಗಿ ಬಂದೋಬಸ್ತಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ನ್ಯಾಯಾಲಯದಿಂದ ಸಹಾಯ ದೊರೆಯದೆಂದು ತಿಳಿದ ನಂತರ ತಾನೇ ಕೋರ್ಟಿಗೆ ಶರಣಾಗುವುದಾಗಿ ಆತ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ. ತನಗೆ ಕರ್ನಾಟಕ ಪೊಲೀಸರಿಂದ ಯಾವುದೇ ವಾರಂಟ್ ದೊರೆತಿಲ್ಲ ಮತ್ತು ತಾನು ಯಾವುದೇ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ, ತಾನು ನಿರಪರಾಧಿಯಾಗಿದ್ದೇನೆ ಎಂದು ಹೇಳಿದ್ದ. ಬೆಂಗಳೂರು ಸ್ಫೋಟದಲ್ಲಿ ಭಾಗಿಯಾಗಿದ್ದವರಿಗೆ ಆಶ್ರಯ ನೀಡಿದ ಆರೋಪ ಮದನಿ ಹೊತ್ತಿದ್ದಾನೆ. ಆತನಿಗೆ ಬೆಂಗಳೂರು ಸ್ಫೋಟದ ಬಗ್ಗೆ ಮಾಹಿತಿಯೂ ಇತ್ತು ಎನ್ನಲಾಗಿದೆ.

ಕೇರಳದಲ್ಲಿ ಮದನಿ ಒಂದು ಕೋಮಿಗೆ ಸೇರಿದ ಅತ್ಯಂತ ಪ್ರಭಾವಿ ನಾಯಕನಾಗಿರುವುದರಿಂದ ಆತನ ನಿವಾಸದ ಸುತ್ತ ಭಾರೀ ಪೊಲೀಸ್ ಭದ್ರತೆ ನೀಡಲಾಗಿತ್ತು. ಕರ್ನಾಟಕದಿಂದ ಕೇರಳಕ್ಕೆ ತೆರಳಿದ್ದ ಎಸಿಪಿ ಓಂಕಾರಯ್ಯ, ಅಲೋಕ್ ಮುಂತಾದವರ ತಂಡ ಕೊನೆಗೂ ಮದನಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಂದು ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಹುಶಃ ನಾಳೆ ಕರ್ನಾಟಕಕ್ಕೆ ಕರೆತರಲಾಗುತ್ತಿದೆ.

ಅಬ್ದುಲ್ ಮದನಿ ಯಾರು? ಆತನ ಪ್ರತಾಪಗಳೇನು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X