ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮರುಕಳಿಸಿದ ಮುಂಬೈ ತಾಜ್ ವೈಭವ

By Mahesh
|
Google Oneindia Kannada News

Taj Hotel, Mumbai
ಮುಂಬೈ, ಆ.16: 2008 ರಲ್ಲಿ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ಸಂಪೂರ್ಣ ಹಾನಿಗೀಡಾಗಿದ್ದ ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಹೋಟೆಲ್ ನವವಧುವಿನಂತೆ ಕಂಗೊಳಿಸುತ್ತಿದ್ದು, ಸ್ವಾತಂತ್ರ್ಯೋತ್ಸವ ದಿನದಂದು (ಆ.15) ಗ್ರಾಹಕರ ಸೇವೆಗೆ ಸಂಪೂರ್ಣವಾಗಿ ಮುಕ್ತವಾಯಿತು.

ಸುಮಾರು ಸಮುದ್ರ 107 ವರ್ಷಗಳ ಸುದೀರ್ಘ ಇತಿಹಾಸವಿರುವ ತಾಜ್ ಹೋಟೆಲ್ ನ ಮರು ನಿರ್ಮಾಣಕ್ಕಾಗಿ 22 ತಿಂಗಳ ಕಾಲ ಮುಚ್ಚಲಾಗಿತ್ತು. ಸುಮಾರು 175 ಕೋಟಿ ರು. ವೆಚ್ಚದಲ್ಲಿ ಸಾವಿರಕ್ಕೂ ಅಧಿಕ ಕಾರ್ಮಿಕರು, ಬಡಗಿಗಳು ಹಗಲು ರಾತ್ರಿ ಅವಿರತವಾಗಿ ದುಡಿದು, ತಾಜ್‌ಗೆ ಮರು ರೂಪ ನೀಡಿದ್ದಾರೆ. ಅದ್ದೂರಿಯಾಗಿ ಅಲಂಕಾರಗೊಂಡಿರುವ ತಾಜ್, ಈಗ ಗ್ರಾಹಕರ ಸೇವೆಗೆ ಸಿದ್ಧವಾಗಿದೆ.

ಮುಂಬೈನ ಬೃಹತ್ ಹೋಟೆಲ್‌ಗಳಲ್ಲೊಂದಾದ ತಾಜ್‌ನಲ್ಲಿ ಒಟ್ಟು 285 ಕೊಠಡಿಗಳಿವೆ. ಈ ಹಿಂದಿನ ದಾಳಿ ಘಟನೆ ನಂತರ ಎಚ್ಚೆತ್ತುಕೊಂಡಿರುವ ಹೋಟೆಲ್ ಆಡಳಿತ ಮಂಡಳಿ, ತನ್ನ ಗ್ರಾಹಕರ ರಕ್ಷಣೆಗೆ ಸಂಪೂರ್ಣ ಆದ್ಯತೆ ನೀಡಿದೆ.

2008 ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದ ಪಾಕ್ ಮೂಲದ ಉಗ್ರರು 60 ಗಂಟೆಗೂ ಅಧಿಕ ಕಾಲ ತಾಜ್ ಹೋಟೆಲ್‌ನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಸುಮಾರು ಒಂದು ದಿನಗಳ ಕಾಲ ತಾಜ್‌ನೊಳಗೆ ಆರ್ಭಟ ಮೆರೆದಿದ್ದ ಭಯೋತ್ಪಾದಕರು ವಿದೇಶಿಯರು ಸೇರಿದಂತೆ 31 ಜನರನ್ನು ಕೊಂದು ಹಾಕಿದ್ದರು. ಮೃತರಲ್ಲಿ 12 ಜನ, ತಾಜ್ ಹೋಟೆಲ್ ಸಿಬ್ಬಂದಿಗಳಾಗಿದ್ದರು.

ಉಗ್ರರ ಕಪಿಮುಷ್ಠಿಯಿಂದ ಸಾರ್ವಜನಿಕರನ್ನು ರಾಷ್ಟ್ರೀಯ ಭದ್ರತಾ ಪಡೆ ರಕ್ಷಿಸುವುದಕ್ಕೂ ಮುನ್ನ 185 ಮೃತಪಟ್ಟು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X