ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರಿಗ್ಯಾಕೆ ತಾರತಮ್ಯ ಮುಖ್ಯಮಂತ್ರಿಗಳೆ...

By Mrutyunjaya Kalmat
|
Google Oneindia Kannada News

Raghavendra Swamiji
ಬೆಂಗಳೂರು, ಆ. 16 : ರಾಜ್ಯ ಸರಕಾರ ಬರೀ ಮನುಷ್ಯರಿಗೆ ಮಾತ್ರ ತಾರತಮ್ಯ ಮಾಡುತ್ತಿಲ್ಲ. ದೇವರಿಗೂ ತಾರತಮ್ಯ ಮಾಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹೊರರಾಜ್ಯಗಳ ದೇವರಿಗೆ ಬೆಣ್ಣ ಹಚ್ಚುವ ಯಡಿಯೂರಪ್ಪ, ರಾಜ್ಯದಲ್ಲಿರುವ ದೇವರುಗಳಿಗೆ ಸುಣ್ಣ ಬಳಿಯುತ್ತಿದ್ದಾರೆ.

ರಾಜ್ಯ ಸರಕಾರ ರಾಜ್ಯದಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಹಣ ನೀಡುವುದಿಲ್ಲ. ಹೊರ ರಾಜ್ಯಗಳ ದೇವಾಲಯಗಳಿಗೆ ಕೋಟಿ ಲೆಕ್ಕದಲ್ಲಿ ರೊಕ್ಕ ನೀಡುತ್ತಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯ ಸರಕಾರ ನೆರೆ ರಾಜ್ಯಗಳಿಗೆ ಸೇರಿದ 4 ದೇವಾಲಯಗಳಿಗೆ 13 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಅದೇ ಅವಧಿಯಲ್ಲಿ ರಾಜ್ಯದಲ್ಲಿರುವ 131 ದೇವಾಲಯಗಳಿಗೆ ಬಿಡುಗಡೆ ಮಾಡಿರುವ ಹಣ ಕೇವಲ 28 ಕೋಟಿ ರುಪಾಯಿಗಳು.

ಆಂಧ್ರಪ್ರದೇಶದ ರಾಘವೇಂದ್ರ ಮಠಕ್ಕೆ 10 ಕೋಟಿ, ಶ್ರೀಶೈಲಂನ ಪಂಡಿತಾರಾಧ್ಯ ಸೇವಾ ಸಮಿತಿಗೆ 2 ಕೋಟಿ, ತಮಿಳುನಾಡಿನ ಕಡಲೂರು ಜಿಲ್ಲೆಯ ತಿರುವಂಡಿಪುರಂನ ದೇವನಾಥಸ್ವಾಮಿ ಲಕ್ಷ್ಮಿ ಹಯಗ್ರೀವ ದೇವಾಲಯಕ್ಕೆ 1 ಕೋಟಿ, ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಅರಕ್ಕಾಡಿಯ ಕಾಳಿಕಾಂಬ ದೇವಾಲಯಕ್ಕೆ 2.7 ಲಕ್ಷ ನೀಡಿದೆ.

ರಾಜ್ಯದಲ್ಲಿ ಸಾವಿರಾರು ದೇವಾಲಯಗಳು ಇವೆ. ಇವುಗಳಲ್ಲಿ ಅನೇಕ ದೇವಾಲಯಗಳು ದಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿವೆ. ಇದರಲ್ಲಿ 131 ದೇವಾಲಯಗಳಿಗೆ ನೀಡಿರುವುದು ಕೇವಲ 28 ಕೋಟಿ ರುಪಾಯಿಗಳು. ಇದರಲ್ಲಿ ಅನೇಕ ದೇವಾಲಯಗಳು ದುರಸ್ತಿ ಹಂತದಲ್ಲಿವೆ. ಇವುಗಳನ್ನು ಪುನಶ್ಚೇತನ ಮಾಡಲು ಯಡಿಯೂರಪ್ಪ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ವಿಶೇಷವಾಗಿದೆ. ರಾಜ್ಯದ ದೇವರು ಏನು ಮಾಡಿವೆ ಯಡಿಯೂರಪ್ಪನವರೆ...?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X