ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವೋವಾದಿಗಳೆ ಚರ್ಚೆಗೆ ಬನ್ನಿ : ಪಿಎಂ

By Mrutyunjaya Kalmat
|
Google Oneindia Kannada News

Manmohan Singh
ನವದೆಹಲಿ, ಆ. 15 : ದೇಶದಲ್ಲಿ ಅಶಾಂತಿಗೆ ಕಾರಣವಾಗಿರುವ ಮಾವೋವಾದಿಗಳು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳೊಂದಿಗೆ ಮಾತಕತೆ ನಡೆಸಲು ಸರಕಾರ ಸಿದ್ಧ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದರು.

64ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡಿ ಅವರು, ಮಾವೋವಾದಿಗಳು ಮತ್ತು ಕಾಶ್ಮೀರದ ಸಮಸ್ಯೆ ಇತ್ಯರ್ಥಕ್ಕೆ ಸರಕಾರ ಎಲ್ಲ ರೆಡಿಯಾಗಿದೆ ಎಂದು. ಮಾವೋವಾದಿಗಳೆ ಹಿಂಸೆಯನ್ನು ಕೈಬಿಟ್ಟು ಬನ್ನಿ. ನಿಮ್ಮ ಜೊತೆ ಸರಕಾರ ನಿಲ್ಲಲ್ಲದೆ, ನೀವು ಹೋರಾಟ ಮಾಡುತ್ತಿರುವ ವಿಷಯಗಳ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ. ಹಿಂದುಳಿದ ಪ್ರದೇಶಗಳು ಮತ್ತು ಅಲ್ಲಿನ ಜನರ ಏಳ್ಗೆಗಾಗಿ ಕಾರ್ಯಕ್ರಮ ರೂಪಿಸೋಣ ಎಂದು ಹೇಳಿದರು.

ಮಾವೋವಾದಿಗಳು ದೇಶದ ಸಮಗ್ರತೆ ಮತ್ತು ಏಕತೆಗೆ ದಕ್ಕು ತರುವ ಕೆಲಸ ಮಾಡುತ್ತಿದ್ದಾರೆ. ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಚರ್ಚೆಯಿಂದ ಮಾತ್ರ ಸಾಮಾಜಿಕ ನ್ಯಾಯ ದೊರೆಕಿಸಿಕೊಡಲು ಸಾಧ್ಯ. ಅಲ್ಲದೇ, ಹಿಂದುಳಿದ ಪ್ರದೇಶಗಳಿಗೆ ಯೋಜನೆಗಳನ್ನು ಶೀಘ್ರದಲ್ಲಿ ರೂಪಿಸಲಾಗುವುದು ಎಂದರು.

ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆಯನ್ನು ಕೈಬಿಡುವಂತೆ ಮನವಿ ಮಾಡಿಕೊಂಡರಲ್ಲದೆ, ಸರಕಾರದೊಂದಿಗೆ ಕಾಶ್ಮೀರಿಗಳು ಕೈಜೋಡಿಸಬೇಕು. ಸರಕಾರ ಪ್ರತಿ ಕಾಶ್ಮೀರಿಗಳು ಇಚ್ಚೆಯಂತೆ ಕಾರ್ಯ ನಿರ್ವಹಿಸಲಿದೆ ಎಂದು ಮನಮೋಹನ್ ಸಿಂಗ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X