ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲ, ಜಲ, ಭಾಷೆ ರಕ್ಷಣೆಗೆ ಬದ್ಧ: ಯಡಿಯೂರಪ್ಪ

By Mrutyunjaya Kalmat
|
Google Oneindia Kannada News

Karnataka govt celebrates 64th Independence Day
ಬೆಂಗಳೂರು, ಆ. 15 : ಬೆಳಗಾವಿ ಗಡಿ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ. ನಾಡಿನ ನೆಲ, ಜಲ ರಕ್ಷಣೆ ವಿಚಾರದಲ್ಲಿ ರಾಜಿಯೇ ಇಲ್ಲ. ನಗರದ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಜಲನಿರ್ಮಲ ಹಾಗೂ ಕನ್ನಡ ಗಂಗಾ ಯೋಜನೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದರು.

64 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಮಾಣಿಕ್ ಷಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಭರವಸೆ ಮತ್ತು ಯೋಜನೆಗಳನ್ನು ಪ್ರಕಟಿಸಿದರು.

ಸಿಎಂ ಭಾಷಣದ ಮುಖ್ಯಾಂಶಗಳು:

* ಬೆಂಗಳೂರು ಮೂಲಸೌಕರ್ಯಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 18,872 ಕೋಟಿ ರುಪಾಯಿ ಅಭಿವೃದ್ಧಿ ಯೋಜನೆ.
* 200 ಕೋಟಿ ರುಪಾಯಿ ವೆಚ್ಚದಲ್ಲಿ ಬೆಂಗಳೂರಿನಲ್ಲಿರುವ 25 ಕೆರೆಗಳ ಅಭಿವೃದ್ಧಿ.
* ಗುಡಿಸಲು ನಿವಾಸಿಗಳಿಗೆ ಬಸವ ಇಂದಿರಾ ಆವಾಸ ವಸತಿ ಯೋಜನೆ.
* ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ.
* ರೈತರಿಗೆ 7 ಸಾವಿರ ಕೋಟಿ ರುಪಾಯಿ ಸಾಲ.
* ಸಾವಯುವ ಕೃಷಿಗೆ ಮುಂದಿನ ವರ್ಷ 200 ಕೋಟಿ ರುಪಾಯಿ.
* ಸ್ವಾತಂತ್ರ್ಯ ಹೋರಾಟಗಾರರ ಗೌರವಧನ 4 ಸಾವಿರ ರುಪಾಯಿಗೆ ಹೆಚ್ಚಳ.
* ಡಿಸೆಂಬರ್ ನಲ್ಲಿ ಬೆಳಗಾವಿಯ ನೂತನ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ.
* ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ಮಾರಕ ಅಭಿವೃದ್ದಿಗೆ ಕ್ರಮ.
* ಶಿವಪುರ, ಹುದಲಿ, ಶಿಕಾರಿಪುರ ಆಲಮಟ್ಟಿ ಸ್ವಾತಂತ್ರ್ಯ ಸಂಗ್ರಾಮದ ನೆಲೆ ಅಭಿವೃದ್ಧಿಗೆ ಕ್ರಮ.
* ಉದ್ಯೋಗ ಸೃಷ್ಟಿಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ.
* ಪಶು ಸಂಗೋಪನೆ ಅಭಿವೃದ್ಧಿಗೆ ಹೊಸ ನೀತಿ.
* 14 ನೀರಾವರಿ ಯೋಜನೆ ಪೂರ್ಣ, 70 ಸಾವಿರ ಎಕರೆಗೆ ನೀರು ಪೂರೈಕೆ.
* ಹಿಂದುಳಿದ 114 ತಾಲ್ಲೂಕುಗಳ ಅಭಿವೃದ್ಧಿಗೆ ಒತ್ತು.
* 300 ಕೋಟಿ ರುಪಾಯಿ ವೆಚ್ಚದಲ್ಲಿ ಈ ವರ್ಷ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ.
* ಮೂಲಸೌಕರ್ಯ ಒದಗಿಸಲು ಮಹಾನಗರ ಪಾಲಿಕೆಗೆ 100 ಕೋಟಿ ರು.
* ಜಿಲ್ಲಾ ಕೇಂದ್ರಗಳಿಗೆ 30 ಕೋಟಿ ರುಪಾಯಿ, ತಾಲ್ಲೂಕು ಕೇಂದ್ರಗಳಿಗೆ 15 ಕೋಟಿ ರುಪಾಯಿ ನೀಡಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X