ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ದುರುಪಯೋಗ : ರಾಹುಲ್ ಗಾಂಧಿ ಖೇದ

By Mrutyunjaya Kalmat
|
Google Oneindia Kannada News

Rahul Gandhi
ಶಿವಮೊಗ್ಗ, ಆ. 14 : ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗವಾಗುತ್ತಿದೆ. ಅದಕ್ಕೆ ಕಾರಣರಾದವರನ್ನು ನೀವೇ ಆಯ್ಕೆ ಮಾಡಿಕೊಂಡಿದ್ದೀರಿ. ಮೈನಿಂಗ್ ಮಾಫಿಯಾ ಕರ್ನಾಟಕದಲ್ಲೂ ಇದೆ. ರೆಡ್ಡಿ ಬ್ರದರ್ಸ್ ನಿಂದ ನೈಸರ್ಗಿಕ ಸಂಪನ್ಮೂಲ ದುರ್ಬಳಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಗಣಿಗಾರಿಕೆ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ದೇಶದಲ್ಲಿ ನೈಸರ್ಗಿಕ ಸಂಪತ್ತು ಯಥೇಚ್ಛವಾಗಿದೆ. ಆದರೂ, ದೇಶ ಹಿಂದುಳಿದಿದೆ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು. ಗಣಿಗಾರಿಕೆಯಲ್ಲಿ ಎಲ್ಲ ಪಕ್ಷದವರೂ ಇದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಯಾರೇ ಆಗಿರಲಿ, ಯಾವ ಪಕ್ಷದಲ್ಲಿರಲಿ. ಅಂತವರನ್ನು ನೀವು ತಿರಸ್ಕರಿಸಿ ಎಂದು ಉತ್ತರಿಸಿದರು.

ಮೀಸಲಾತಿ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಚರ್ಚೆಯ ವಿಷಯವಾಗಬಾರದು. ನಿಮ್ಮಿಂದ ಬೇಡ ಎಂಬುದನ್ನು ನಾನು ನಿರೀಕ್ಷಿಸುವುದಿಲ್ಲ. ಆದರೆ, ಸೀಟುಗಳನ್ನು ಹೆಚ್ಚು ಮಾಡಬೇಕೆಂಬುದು ನಿಮ್ಮ ಸಲಹೆಯಾಗಬೇಕು. ಇಂದಿಗೂ ಹಳ್ಳಿಗಳಲ್ಲಿ ಮೀಸಲಾತಿ ಅಗತ್ಯವಿದೆ ಎಂದು ರಾಹುಲ್ ಪ್ರತಿಪಾದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X