ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಕಾಸಿಗೆ ಪಿಎಂ ಕುರ್ಚಿ ಹರಾಜು

By Mrutyunjaya Kalmat
|
Google Oneindia Kannada News

ಮೈಸೂರು, ಆ. 14 : ಪ್ರಧಾನಮಂತ್ರಿ ಹುದ್ದೆ ದೇಶದ ಅತ್ಯಂತ ಪ್ರಭಾವಿ ಹುದ್ದೆ. ಆದರೆ, ಅಂತಹ ಹುದ್ದೆಯ ಬೆಲೆ ಇದೀಗ ಮೂರು ಕಾಸಿಗೆ ಹರಾಜಾಗುತ್ತಿದೆ. ಉನ್ನತ ಹುದ್ದೆ ದಿನದಿಂದ ದಿನಕ್ಕೆ ತನ್ನ ಮೌಲ್ಯವನ್ನು ಕಳೆದುಕೊಳ್ಳತೊಡಗಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಪರೋಕ್ಷವಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕಾರ್ಯವೈಖರಿಯನ್ನು ಟೀಕಿಸಿದರು.

ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಶನಿವಾರದ ಟೈಮ್ಸ್ ಆಫ್ ಇಂಡಿಯಾ ಇಂಗ್ಲಿಷ್ ಪತ್ರಿಕೆ ಸಂಪಾದಕೀಯ ಪುಟದಲ್ಲಿ ಕಾದಂಬರಿಕಾರ ಚೇತನ್ ಭಗತ್ ಅವರ ಬರೆದಿರುವ " PM and the speech writer" ಎಂಬ ವಿಡಂಬನಾತ್ಮಕ ಲೇಖನ ಪ್ರಸ್ತಾಪಿಸಿ ಪ್ರಧಾನಮಂತ್ರಿಗಳ ನಡೆದುಕೊಳ್ಳುತ್ತಿರುವ ಕ್ರಮ ಖಂಡನೀಯ ಎಂದರು.

ಇಂದು ಬೆಳಗ್ಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯನ್ನು ಕೈಗೆತ್ತಿಕೊಂಡೆ. ಪತ್ರಿಕೆ ಸಂಪಾದಕೀಯ ಪುಟದಲ್ಲಿ ಚೇತನ್ ಭಗತ್ ಎಂಬುವವರು ಬರೆದಿರುವ ವಿಡಂಬನಾತ್ಮಕ ಲೇಖನ ಓದಿ ಆಶ್ಚರ್ಯ ಮತ್ತು ಅಸಮಾಧಾನವಾಯಿತು. ಆ ಲೇಖನದ ತಿರುಳೆನೆಂದರೆ, ನಾಳೆ ಭಾರತಕ್ಕೆ ಸ್ವಾತಂತ್ರ್ಯ ಬಂದು 63 ವರ್ಷಗಳು ಮುಗಿದವು. ದಿಲ್ಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಮಂತ್ರಿಗಳು ದೇಶವನ್ನುದ್ದೇಶಿಸಿ ಮಾತನಾಡಬೇಕು. ಆ ಸಂದರ್ಭದಲ್ಲಿ ದೇಶದ ಜನತೆ ಶುಭಸಂದೇಶ, ಹೊಸ ಹೊಸ ಯೋಜನೆಗಳನ್ನು ನೀಡುವುದು ರೂಡಿಸಿಕೊಂಡು ಬಂದ ಪದ್ಧತಿ.

ಇಂತಹ ಮಹತ್ವದ ದಿನದಂದು ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಪ್ರಧಾನಮಂತ್ರಿ ಪೂರ್ವ ತಯಾರಿ ಮಾಡಿಕೊಂಡಿರುತ್ತಾನೆ. ಆದರೆ, ಇಂದಿನ ಪ್ರಧಾನಮಂತ್ರಿಗಳಲ್ಲಿ ಯಾವುದೇ ಸ್ವಂತಿಕೆ ಇಲ್ಲ. ನಾಳೆ ಸ್ವಾತಂತ್ರ್ಯ ದಿನಚರಣೆಯಿದೆ ಎನೆಂದು ಭಾಷಣ ಮಾಡಲಿ ಎಂದು ಇನ್ನೊಬ್ಬರನ್ನು ಕೇಳುತ್ತಿದ್ದಾರೆ. ಅವರಾರು ಎಂದು ನೀವೇ ಉಹಿಸಿಕೊಳ್ಳಿ. ಒಟ್ಟಿನಲ್ಲಿ ಪ್ರಧಾನಮಂತ್ರಿ ಹುದ್ದೆ ದಿನದಿಂದ ದಿನಕ್ಕೆ ಮೌಲ್ಯ ಕಳೆದುಕೊಳ್ಳುತ್ತಿರುವುದು ವಿಷಾಧದ ಸಂಗತಿ ಎಂದು ಅಡ್ವಾಣಿ ತೀವ್ರ ಬೇಸರ ವ್ಯಕ್ತಪಡಿಸಿದರು.

1997ರಲ್ಲಿ ನಾನು ಸ್ವರ್ಣಜಂಯತಿ ರಥಯಾತ್ರೆ ಮೈಸೂರಿನಿಂದ ಆರಂಭಿಸಿ ದೇಶದ್ಯಾಂತ ಸಂಚರಿಸಿದೆ. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತು. 6 ವರ್ಷಗಳ ಕೇಂದ್ರದಲ್ಲಿ ಅಧಿಕಾರ ನಡೆಸಿದ ನಾವು ಉತ್ತಮ ಆಡಳಿತ ನೀಡಿದ್ದೇವೆ. ಭಾರತ ಪರಮಾಣು ಶಕ್ತಿ ಹೊಂದಿದ್ದು ನಮ್ಮ ಸರಕಾರವಿದ್ದಾಗಲೇ ಎಂದು ಅಡ್ವಾಣಿ ಹೇಳಿದರು.

ಬಿಜೆಪಿ ಉತ್ತರ ಭಾರತದ ಪಕ್ಷವೆಂದು ಹೆಸರಿಡಲಾಗಿತ್ತು. ಆದರೆ, ನಾವು ದಕ್ಷಿಣ ಭಾರತದಲ್ಲೂ ಕಾಲಿಟ್ಟೆದ್ದೇವೆ. 2008ರಿಂದ ಈಚೆಗೆ ಕರ್ನಾಟಕದಲ್ಲಿ ನಡೆದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಸಾಧಿಸಿದೆ. ಎಲ್ಲ ವಿಜಯಕ್ಕೂ ಯಡಿಯೂರಪ್ಪ ನೇತೃತ್ವದ ಸರಕಾರದ ಉತ್ತಮ ಆಡಳಿತವೇ ಕಾರಣವಾಗಿದೆ. ಕರ್ನಾಟಕ ಬಿಜೆಪಿ ಆಡಳಿತದಿಂದ ಸುರಾಜ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದೇಶದಲ್ಲಿ ಮೊದಲ ಬಾರಿಗೆ ಅದಿರು ರಫ್ತು ನಿಷೇಧ ಮಾಡಿದ್ದು ಕರ್ನಾಟಕ ಸರಕಾರ. ಇಂತಹ ಕಾನೂನು ತರಲು ಸರಕಾರಕ್ಕೆ ಧೈರ್ಯ ಬೇಕು. ಇಂತಹ ಎದೆಗಾರಿಕೆಯನ್ನು ಯಡಿಯೂರಪ್ಪ ತೋರಿಸಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ತಡೆಯಲು ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಿರುವುದು ಸ್ವಾಗತಾರ್ಹ ಕ್ರಮ ಎಂದು ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X