ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವೋಟಿಂಗ್ ಯಂತ್ರ ಸರಿಯಿಲ್ಲ : ಐಟಿ ತಜ್ಞರು

By Mahesh
|
Google Oneindia Kannada News

EVM is not tamper proof
ವಾಷಿಂಗ್ಟನ್, ಆ.13: ಭಾರತೀಯ ಚುನಾವಣಾ ಆಯೋಗ ಜಾರಿಗೆ ತಂದಿರುವ ಮತದಾನ ಯಂತ್ರವು ಅಕ್ರಮ ತಡೆಯುವ ಸಾಮರ್ಥ್ಯ ಹೊಂದಿಲ್ಲ ಎಂಬ ಆಘಾತಕಾರಿ ಅಂಶವನ್ನು ಇದೀಗ ಅಮೆರಿಕದ ಐಟಿ ತಜ್ಞರೂ ಬಹಿರಂಗಪಡಿಸಿದ್ದು, ಪಾರದರ್ಶಕ ಹಾಗೂ ಸುರಕ್ಷಿತ ಮತದಾನ ವ್ಯವಸ್ಥೆಯನ್ನು ಎತ್ತಿಹಿಡಿಯಲು ಬದಲಿ ವಿಧಾನಗಳನ್ನು ಕಂಡುಕೊಳ್ಳುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಈ ತಜ್ಞರು ಸೂಚಿಸಿದ್ದಾರೆ.

ಇದರೊಂದಿಗೆ ಈ ಕುರಿತು ಸಂಶಯ ವ್ಯಕ್ತಪಡಿಸಿದ್ದ ಬಿಜೆಪಿಯ ಆತಂಕ ನಿಜವಾದಂತಾಗಿದೆ. ಭಾರತೀಯ ಚುನಾವಣಾ ಆಯೋಗ ಜಾರಿಗೆ ತಂದಿರುವ ಈ ಮತದಾನ ಯಂತ್ರಗಳು ಸುರಕ್ಷಿತವಲ್ಲ. ಅಕ್ರಮ ನಿರೋಧಕವಲ್ಲ ಎಂಬುದಾಗಿ ಈ ಕ್ಷೇತ್ರದಲ್ಲಿನ ತಜ್ಞರು, ಐಟಿ ತಜ್ಞರು ಹೇಳಿದ್ದಾರೆ.

ಮಾಜಿ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರು ಈ ಮತದಾನ ಯಂತ್ರ ಸುರಕ್ಷಿತ ಎಂದು ಹೇಳಿಕೊಂಡಿದ್ದರೆ,ಐಟಿ ತಜ್ಞರು ಇದನ್ನು ಬಲವಾಗಿ ಆಕ್ಷೇಪಿಸಿ ಈ ಮತಯಂತ್ರಗಳಲ್ಲಿನ ದೋಷಗಳನ್ನು ಆಧಾರಸಹಿತವಾಗಿ ಬಹಿರಂಗಪಡಿಸಿದ್ದರು.

ನವೀನ್ ಚಾವ್ಲಾ ಸಮರ್ಥನೆ :ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತೆ ಅಧಿಕಾರಕ್ಕೆ ಬಂದಾಗಲೇ ಈ ಕುರಿತಂತೆ ಅಚ್ಚರಿ, ಸಂಶಯಗಳು ವ್ಯಕ್ತವಾಗಿದ್ದವು. ಮುಖ್ಯಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಅವರ ನಿಷ್ಪಕ್ಷಪಾತಿ ನಿಲುವಿನ ಬಗೆಗೂ ಅನುಮಾನಗಳು ವ್ಯಕ್ತವಾಗಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಈ ಇವಿಎಂಎಸ್‌ಗಳನ್ನು ಜಾರಿಗೆ ತಂದ ಬಳಿಕ ಇದರಲ್ಲಿ ಅನೇಕ ಅಕ್ರಮ ಎಸಗಲು ಸಾಧ್ಯವಿದೆ. ಈ ಬಗ್ಗೆ ತಜ್ಞರ ಸಮಿತಿಯೊಂದರ ಮುಂದೆ ಬಂದ ವಾದ-ಪ್ರತಿವಾದಗಳನ್ನು ಆಲಿಸಿದಾಗ ಇದು ವ್ಯಕ್ತವಾಗಿದೆ. ಇದರಿಂದಾಗಿ ಭಾರತೀಯ ಮತದಾನ ಯಂತ್ರಗಳು ಸಾಕಷ್ಟು ಸುರಕ್ಷೆ, ಪಾರದರ್ಶಕತೆಗಳನ್ನು ಹೊಂದುವಂತೆ ಮಾಡಿ ಮತದಾರರಲ್ಲಿ ವಿಶ್ವಾಸ ತುಂಬಲು ಹೊಸ ಕ್ರಮಗಳ ಅಗತ್ಯವಿದೆ ಎಂದು ಈ ತಜ್ಞರು ಬೊಟ್ಟು ಮಾಡಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯ,ಮೈಕ್ರೋಸಾಫ್ಟ್ ರೀಸರ್ಚ್‌ ಸೆಂಟರ್ ,ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಎಟಿ ಅಂಡ್‌ಟಿ ಶಾನ್ನೂನ್ ಲ್ಯಾಬ್ಸ್‌, ಮೇರಿಲ್ಯಾಂಡ್ ವಿಶ್ವವಿದ್ಯಾಲಯಯುನಿರ್ವಸಿಟಿ ಆಫ್ ವಾಟರ್ಲೂ,ಯುನಿರ್ವಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೀ ಕ್ಲೀಯರ್ ಬ್ಯಾಲೆಟ್ ಗ್ರೂಪ್‌, ಇಲೆಕ್ಷನ್ ಆಡಿಟ್ಸ್‌ನ ಮುಂತಾದ ಪ್ರಮುಖ ಸಂಸ್ಥೆಯ ತಜ್ಞರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಉಪ ಚುನಾವಣಾ ಆಯುಕ್ತ ಅಲೋಕ್ ಶುಕ್ಲಾ, ಮದ್ರಾಸ್ ಐಐಟಿಯ ಮಾಜಿ ನಿರ್ದೇಶಕ ಪಿ.ವಿ.ಇಂದಿರೇಶನ್ ಅವರು ಈ ಮತದಾನ ಯಂತ್ರಗಳಲ್ಲಿ ಸುರಕ್ಷತೆಯ ಕೊರತೆ ಇದೆ ಎಂಬುದನ್ನು ಅಲ್ಲಗಳೆದು, ಇದು ಸಂಪೂರ್ಣ ಸುರಕ್ಷಿತವಾಗಿದೆ. ಇದನ್ನು ಬದಲಾಯಿಸಬೇಕಾದ ಅಗತ್ಯವೇ ಇಲ್ಲ. ಎಲ್ಲ ಆರೋಪಗಳು ಉತ್ಪ್ರೇಕ್ಷಿತವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X